Type a search term to find related articles by LIMS subject matter experts gathered from the most trusted and dynamic collaboration tools in the laboratory informatics industry.
Retina | |
---|---|
Right human eye cross-sectional view. Courtesy NIH National Eye Institute. Many animals have eyes different from the human eye. | |
Gray's | subject #225 1014 |
Artery | central retinal artery |
MeSH | Retina |
Dorlands/Elsevier | Retina |
ಕಶೇರುಕದ ಕಣ್ಣಿನ ಒಳಭಾಗದಲ್ಲಿರುವ ರೆಟಿನಾ ವು ಬೆಳಕಿನ-ಸಂವೇದನಶೀಲ ಅಂಗಾಂಶವನ್ನು ಹೊಂದಿದೆ. ಕ್ಯಾಮರಾದ ಫಿಲ್ಮ್‌ನಲ್ಲಾಗುವಂತೆ ಕಣ್ಣಿನ ಚಾಕ್ಷುಷವು ತಯಾರಿಸಿದ ನಾವು ನೋಡುವ ಪ್ರಪಂಚದ ಚಿತ್ರವನ್ನು ರೆಟಿನಾದ ಮೇಲೆ ಮೂಡಿಸುತ್ತದೆ. ರೆಟಿನಾದ ಮೇಲೆ ಬೀಳುವ ಬೆಳಕು ರಾಸಾಯನಿಕ ಮತ್ತು ವಿದ್ಯುತ್ತಿನಂಥ ಘಟನೆಗಳ ಅನುಕ್ರಮವನ್ನು ಸೃಷ್ಠಿಸುತ್ತದೆ ಅದು ಕೊನೆಗೆ ನರದ ಆವೇಗವನ್ನು ಪ್ರಚೋದಿಸುತ್ತದೆ. ಇದನ್ನು ಚಾಕ್ಷುಷ ನರದ ತಂತುಗಳ ಮೂಲಕ ಅನೇಕ ಮೆದುಳಿನ ಚಾಕ್ಷುಷ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ.
ಕಶೇರುಕದ ಭ್ರೂಣೀಯ ಅಭಿವೃದ್ಧಿಯಲ್ಲಿ, ರೆಟಿನಾ ಮತ್ತು ಚಾಕ್ಷುಷ ನರವು ಮೆದುಳಿನ ಅಭಿವೃದ್ಧಿಯ ಭಾಗವಾಗಿದೆ, ಆದ್ದರಿಂದ ರೆಟಿನಾವನ್ನು ಕೇಂದ್ರ ನರ ವ್ಯವಸ್ಥೆಯ (CNS) ಪ್ರಮುಖ ಭಾಗವಾಗಿ ಪರಿಗಣಿಸಲಾಗಿದೆ.[೧] CNS ಭಾಗವಾಗಿರುವುದಷ್ಟೇ ಅಲ್ಲದೆ ಆಕ್ರಮಣಶೀಲವಲ್ಲದೆ ನೋಡಬಹುದಾಗಿದೆ.
ರೆಟಿನಾವು ಸಂಕೀರ್ಣವಾಗಿದ್ದು, ಸಿನಾಪ್ಸಿಸ್‌ಗಳಿಂದ ಅಂತರ್ಸಂಪರ್ಕಗೊಂಡ ಅನೇಕ ಪದರಗಳ ರಚನೆಯನ್ನು ಒಳಗೊಂಡಿದೆ. ಫೊಟೊಸೆಪ್ಟಾರ್ ಕೋಶಗಳು ಮಾತ್ರ ನೇರವಾಗಿ ಸಂವೇದನೆಗೊಳ್ಳುವ ನ್ಯೂರಾನ್‌ಗಳಾಗಿವೆ. ಇವುಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು: ರಾಡ್‌ಗಳು ಮತ್ತು ಕೋನ್‌ಗಳು. ರಾಡ್‌ಗಳು ಪ್ರಮುಖವಾಗಿ ಮಂದ ಬೆಳಕಿನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕಪ್ಪು ಮತ್ತು ಬಿಳುಪಿನ ನೋಟವನ್ನೊದಗಿಸುತ್ತದೆ ಹಾಗೆಯೇ ಕೋನ್‌ಗಳು ಹಗಲಿನ ನೋಟಕ್ಕೆ ಮತ್ತು ಬಣ್ಣಗಳ ಗ್ರಹಿಕೆಯನ್ನೊದಗಿಸುತ್ತದೆ. ಮೂರನೇಯ, ಅತ್ಯಂತ ಅಪರೂಪದ ವಿಧವಾದ ಫೋಟೊರೆಸೆಪ್ಟಾರ್ ಆದ ಫೊಟೊಸೆನ್ಸಿಟಿವ್ ಗ್ಯಾಂಗ್ಲಿಯಾನ್ ಕೋಶವು ಹಗಲು ಬೆಳಕಿನಲ್ಲಿ ಆತ್ಮಾರ್ಥಕ ಪ್ರತಿಕ್ರಿಯೆಗಳನ್ನೊದಗಿಸುತ್ತದೆ.
ರಾಡ್‌ಗಳು ಮತ್ತು ಕೋನ್‌ಗಳ ನರ ಸಂಕೇತಗಳು ಬೇರೆ ರೆಟಿನಾದ ನ್ಯೂರಾನ್‌ಗಳಿಂದ ಸಂಕೀರ್ಣ ಸಂಸ್ಕರಣೆಗೆ ಒಳಪಡುತ್ತದೆ. ಚಾಕ್ಷುಷ ನರದಿಂದ ಬಂದ ನರತಂತುಗಳಿರುವ ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳಲ್ಲಿನ ಉತ್ಪನ್ನವು ಕ್ರಿಯಾಸಂಭಾವ್ಯತೆಯ ರೂಪವನ್ನು ಪಡೆಯುತ್ತದೆ. ನೋಟದ ಅನುಭವದ ಕೆಲವು ಪ್ರಮುಖ ಅಂಶಗಳನ್ನು ರೆಟಿನಾದ ಸಂಕೇತೀಕರಣ ಮತ್ತು ಬೆಳಕಿನ ಸಂಸ್ಕರಣೆದ ಮೂಲಕ ಗುರುತಿಸಲು ಸಹಾಯಕವಾಗಿದೆ. Branch retinal vein occlusion.jpg
ಕಶೇರುಕ ರೆಟಿನಾವು ವಿವಿಧ ಪದರಗಳನೊಳಗೊಳ್ಳುತ್ತದೆ.[೨] ಅತ್ಯಂತ ಒಳಗಿನ ಭಾಗದಿಂದ ಅತ್ಯಂತ ಹೊಗಿನ ಭಾಗಗಳವರೆಗೆ ಇರುವ ಭಾಗಗಳೆಂದರೆ:
ಹೊರಗಿನಿಂದ ಹತ್ತು ಪದರಗಳಲ್ಲಿ ನಾಲ್ಕು ಮುಖ್ಯ ಪದರಗಳೆಂದರೆ: ಪಿಗ್ಮೆಂಟ್ ಎಪಿಥೇಲಿಯಮ್, ಬೆಳಕಿನ ಗ್ರಾಹಕ ಪದರ, ಬೈಪೊಲಾರ್ ಕೋಶಗಳು, ಮತ್ತು ಕೊನೆಯದಾಗಿ ಗ್ಯಾಂಗ್ಲಿಯಾನ್ ಕೋಶದ ಪದರ.
ಆದ್ದರಿಂದ ಚಾಕ್ಷುಷ ನರವು ನರಕ್ಕಿಂತ ಹೆಚ್ಚಾಗಿ ಕೇಂದ್ರದ ಪ್ರದೇಶವಾಗಿದ್ದು, ಬೈಪೊಲಾರ್‌ಗಳನ್ನು ಡೈಎನ್ಸೆಫಲಾನ್‌ನಲ್ಲಿ ದೃಶ್ಯೀಯ ರಿಲೇ ಸ್ಟೇಶನ್ ಆಗಿರುವ (ಮುಮ್ಮೆದುಳಿನ ಹಿಂಭಾಗ) ಪಾರ್ಶ್ವದ ಗೆನಿಕ್ಯುಲೇಟ್ ಮೈಗೆ ಸಂಪರ್ಕಿಸುತ್ತದೆ.[೧] ನೋಟದೊಂದಿಗೆ ನೇರವಾಗಿ ಒಳಗೊಳ್ಳದ ಹೆಚ್ಚುವರಿ ರಚನೆಗಳು ಕೆಲವು ಕಶೇರುಕ ತಂಡಗಳಲ್ಲಿನ ರೆಟಿನಾದ ಬಾಹ್ಯವೃದ್ದಿಗಳಾಗಿರುವುದನ್ನು ಕಾಣಬಹುದು. ಹಕ್ಕಿಗಳಲ್ಲಿ, ಪೆಕ್ಟೆನ್ ಸಂಕೀರ್ಣ ಆಕಾರದ ನಾಳದ ರಚನೆಯಾಗಿದ್ದು ರೆಟಿನಾದ ಮೂಲಕ ಲೋಳೆಯಂಥ ಅಂಗಾಶವನ್ನು ನಿಯೋಜಿಸುತ್ತದೆ; ಇದು ಕಣ್ಣಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು, ಮತ್ತೂ ನೋಟಕ್ಕೂ ಸಹಾಯವನ್ನೊದಗಿಸುತ್ತದೆ. ಸರೀಸೃಪಗಳು ಚಿಕ್ಕದಾದ, ಪಪಿಲ್ಲರಿ ಕೋನ್ ಗಳಿಗೆ ಅನ್ವಯಿಸುಬಹುದಾದ ಆದರೆ ಹೆಚ್ಚು ಸರಳವಾದ ಆಕಾರವನ್ನು ಹೊಂದಿದೆ.[೩]
ಪ್ರೌಢ ಮಾನವನಲ್ಲಿ ರೆಟಿನಾವು ಸುಮಾರು ೭೨% ರಷ್ಟು ಗೋಲಕಾರವಾಗಿದ್ದು ೨೨ ಮಿಮಿ ವ್ಯಾಸವನ್ನು ಹೊಂದಿದೆ. ಪೂರ್ಣ ರೆಟಿನಾವು ಸುಮಾರು ೭ ಮಿಲಿಯನ್ ಕೋನ್‌ಗಳು ಮತ್ತು ೭೫ರಿಂದ ೧೫೦ ಮಿಲಿಯನ್ ರಾಡ್‌ಗಳನ್ನು ಹೊಂದಿದೆ. ರೆಟಿನಾದ ಪ್ರದೇಶವು ಚಾಕ್ಷುಷ ತಟ್ಟೆಯಾಗಿದ್ದು, ಬೆಳಕಿನ ಗ್ರಾಹಕಗಳಿಲ್ಲದಿರುವುದರಿಂದ ಕುರುಡು ಪ್ರದೇಶವೆಂದು ಕರೆಯುವರು. ಇದರ ಬಿಳಿ ಪ್ರದೇಶವು ೩ ಮಿಮಿ² ಇದ್ದು ದೀರ್ಘವೃತ್ತದಂತೆ ಗೋಚರಿಸುತ್ತದೆ. ಈ ತಟ್ಟೇಯ ಟೆಂಪೋರಲ್ (ದೇವಾಲಯಗಳ ದಿಕ್ಕಿನಲ್ಲಿ)ನಲ್ಲಿರುವುದು ಮಕ್ಯುಲ. ಇದರ ಮಧ್ಯದಲ್ಲಿರುವ ಫೊವೆಯ ಒಂದು ಕುಳಿಯಾಗಿದ್ದು ಕೇಂದ್ರೀಯ ನೋಟದ ತೀಕ್ಷ್ಣತೆಗೆ ಕಾರಣವಾಗಿದೆ ಆದರೆ ರಾಡ್‌ಗಳು ಕಡಿಮೆಯಿರುವುದರಿಂದ ಬೆಳಕಿಗೆ ಕಡಿಮೆ ಸಂವೇದನಾಶೀಲವಾಗಿದೆ. ಮಾನವ ಮತ್ತು ಮಾನವನಲ್ಲದ ಸಸ್ತನಿ ವರ್ಗದ ಪ್ರಾಣಿಗಳು ಒಂದು ಫೊವೆಯವನ್ನು ಹೊಂದಿವೆ, ಇದಕ್ಕೆ ವಿರುದ್ಧವಾಗಿ ಪಕ್ಷಿ ಸಂಕುಲವು ಎರೆಡು ಫೊವೆಯವನ್ನು ಹೊಂದಿದ್ದು ನಾಯಿಗಳು ಮತ್ತು ಬೆಕ್ಕುಗಳು ಯಾವುದೇ ಫೊವೆಯವನ್ನು ಹೊಂದಿಲ್ಲ, ಬದಲಾಗಿ ಇವುಗಳು ವಿಶ್ಯುಯಲ್ ಸ್ಟ್ರೀಕೆನ್ನುವ ಕೇಂದ್ರೀಯ ಪಟ್ಟೆಯನ್ನೊಳಗೊಂಡಿದೆ. ಫೊವೆಯದ ಸುತ್ತ ವಿಸ್ತರಿಸಿರುವ ಕೇಂದ್ರೀಯ ರೆಟಿನಾವು ಸುಮಾರು ೬ ಮಿಮಿ ಇದ್ದ ನಂತರ ಅಂಚಿನ ರೆಟಿನಾ ಇರುತ್ತದೆ. ರೆಟಿನಾದ ತುದಿಯನ್ನು ಒರ ಸೆರೆಟಾದಿಂದ ವ್ಯಾಖ್ಯಾನಿಸಬಹುದು. ಮಧ್ಯಾಹ್ನರೇಖೆಯ ಸಮತಲವಾಗಿರುವ ಅತ್ಯಂತ ಸೂಕ್ಷ್ಮಪ್ರದೇಶವಾದ ಒರಾಗಳ (ಅಥವಾ ಮಕ್ಯುಲ) ನಡುವಿನ ಉದ್ದವು ಸುಮಾರು ೩.೨ ಮಿಮಿ.
ರೆಟಿನಾದ ಭಾಗವು ೦.೫ ಮಿಮಿಕ್ಕಿಂತ ಹೆಚ್ಚು ದಪ್ಪವಿರುವುದಿಲ್ಲ. ಇದು ನರ ಕೋಶಗಳ ಮೂರು ಪದರಗಳನ್ನು ಹೊಂದಿದ್ದು ಅವುಗಳಲ್ಲಿ ಎರಡು ಸಿನಾಪ್ಸಿಸ್‌ಗಳು ಒಂದೇ ರೀತಿಯ ರಿಬ್ಬನ್ ಸಿನಾಪ್ಸಿಸ್‌ಗಳನ್ನೊಳಗೊಂಡಿದೆ. ಚಾಕ್ಷುಷ ನರವು ಗ್ಯಾಂಗ್ಲಿಯಾನ್ ಕೋಶಗಳ ನರತಂತುಗಳನ್ನು ಮೆದುಳಿಗೆ ಮತ್ತು ರೆಟಿನಾದ ಮೂಲಕ ತೆರೆದುಕೊಳ್ಳುವ ರಕ್ತನಾಳಗಳಿಗೆ ಸಂಪರ್ಕವನ್ನೊದಗಿಸುತ್ತದೆ. ಗ್ಯಾಂಗ್ಲಿಯಾನ್ ಕೋಶಗಳು ರೆಟಿನಾದ ಒಳಭಾಗದಲ್ಲಿದ್ದು ಫೊಟೊರೆಸೆಪ್ಟೀವ್ ಕೋಶಗಳು ಹೊರಭಾಗದಲ್ಲಿರುತ್ತದೆ. ಕೌಂಟರ್-ಇಂಟ್ಯೂಟಿವ್ ಜೋಡಣೆಯಿಂದಾಗಿ ಬೆಳಕು ಮೊದಲು ಗ್ಯಾಂಗ್ಲಿಯಾನ್ ಕೋಶಗಳ ಮೂಲಕ ಮತ್ತು ರಾಡ್‌ಗಳು ಮತ್ತು ಕೋನ್‌ಗಳನ್ನು ತಲುಪುವ ಮೊದಲು ಸುತ್ತ ಮತ್ತು ರೆಟಿನಾದ ಮೂಲಕ ಹಾದುಹೋಗುತ್ತದೆ (ಕಾಣಿಸದ ಅದರ ಕ್ಯಾಪಿಲರಿ ನರವನ್ನೊಳಗೊಂಡು). ಆದಾಗ್ಯೂ ಇದು ಎಪಿಥೇಲಿಯಮ್ ಅಥವಾ ಕೊರಯ್ಡ್ (ಎರಡೂ ಅಪಾರದರ್ಶಕವಾಗಿವೆ) ಮೂಲಕ ಹಾದುಹೋಗುವುದಿಲ್ಲ.
ಬೆಳಕಿನ ಗ್ರಾಹಕಗಳ ಮುಂದಿರುವ ಕ್ಯಾಪಿಲರಿಗಳಲ್ಲಿರುವ ಬಿಳಿಯ ರಕ್ತ ಕಣಗಳನ್ನು ನೀಲಿ ಬೆಳಕಿನಲ್ಲಿ ನೋಡುವಾಗ ಹೊಳೆಯುವ ಚಿಕ್ಕ ಚಲಿಸುವ ಬಿಂದುಗಳಂತೆ ಗ್ರಹಿಸಬಹುದಾಗಿದೆ. ಇದನ್ನು ನೀಲೀ ಕ್ಷೇತ್ರದ ಎಂಟೋಪ್ಟಿಕ್ ವಿದ್ಯಮಾನ (ಅಥವಾ ಶೀರರ್‌ನ ವಿದ್ಯಮಾನ) ಎನ್ನುವರು.
ಗ್ಯಾಂಗ್ಲಿಯಾನ್ ಕೋಶದ ಪದರ ಮತ್ತು ರಾಡ್‌ಗಳು ಮತ್ತು ಕೋನ್‌ಗಳ ನಡುವೆ ನ್ಯೂರೊಫಿಲ್‌ಗಳ ಎರಡು ಪದರಗಳಿದ್ದು ಅಲ್ಲಿ ಸಿನಾಪ್ಟಿಕ್ ಸಂಪರ್ಕವುಂಟಾಗುತ್ತದೆ. ನ್ಯೂರೊಫಿಲ್ ಪದರಗಳು ಹೊರಗಿನ ಪ್ಲೆಕ್ಸಿಫಾರ್ಮ್ ಪದರ ಮತ್ತು ಒಳಗಿನ ಪ್ಲೆಕ್ಸಿಫಾರ್ಮ್ ಪದರಗಳಾಗಿವೆ. ಹೊರಭಾಗದ ರಾಡ್‌ಗಳು ಮತ್ತು ಕೋನ್‌ಗಳು ಲಂಬವಾಗಿ ಚಲಿಸುವ ಬೈಪೊಲಾರ್ ಕೋಶಗಳೊಂದಿಗೆ ಸಂಪರ್ಕ ಹೊಂದಿರುತ್ತದೆ, ಮತ್ತು ಸಮತಲವಾಗಿರುವ ಸಮತಲ ಕೋಶಗಳು ಗ್ಯಾಂಗ್ಲಿಯಾನ್ ಕೋಶಗಳೊಂದಿಗೆ ಸಂಪರ್ಕ ಹೊಂದಿರುತ್ತದೆ.
ಕೇಂದ್ರದ ರೆಟಿನಾವು ಕೋನ್-ಪ್ರಭಾವಿತವಾಗಿದ್ದು, ಅಂಚಿನ ರೆಟಿನಾವು ರಾಡ್-ಪ್ರಭಾವಿತವಾಗಿರುವುದಾಗಿದೆ. ಒಟ್ಟಾರೆಯಾಗಿ ಏಳು ಮಿಲಿಯನ್ ಕೋನ್‌ಗಳು ಮತ್ತು ನೂರು ಮಿಲಿಯನ್ ರಾಡ್‌ಗಳಿವೆ. ಮಕ್ಯುಲದ ಮಧ್ಯದಲ್ಲಿರುವ ಫೊವೆಯಾದ ಕುಳಿಯಲ್ಲಿ ಕೋನ್‌ಗಳು ಚಿಕ್ಕದಾಗಿರುತ್ತದೆ ಮತ್ತು ಷಡ್ಭುಜಾಕೃತಿಯ ಮೊಸಾಯಿಕ್ ಆಗಿದ್ದು ಅತ್ಯಂತ ಸಮರ್ಥವಾಗಿದೆ ಮತ್ತು ಹೆಚ್ಚು ಸಾಂದ್ರವಾಗಿದೆ. ಫೊವೆಯ ಇಳಿಜಾರಿನೊಂದಿಗೆ ಫೊವೆಯ ವಲಯ ಅಥವಾ ರೆಟಿನಾದ ಅತ್ಯಂತ ದಪ್ಪದ ಪ್ರದೇಶವಾದ ಪ್ಯಾರಾಫೊವೆಯನಿರ್ಮಾಣವಾಗುವ ಮೊದಲೇ ಕುಳಿಯ ಕೆಳಗಿರುವ ಇತರ ರೆಟಿನಾ ಪದರಗಳು ಸ್ಥಳಾಂತರಗೊಂಡಿರುತ್ತದೆ. ಬಣ್ಣ ಕೊಡುವ ವರ್ಣದ್ರವ್ಯಗಳಿಂದಾಗಿ ಮಕ್ಯುಲವು ಹಳದಿ ವರ್ಣಕತೆಯನ್ನು ಹೊಂದಿದ್ದು (ಅಕ್ಷಿಪಟಲದ ಹೆಚ್ಚು ದೃಷ್ಟಿ ತೀಕ್ಷ್ಣತೆಯ ಪ್ರದೇಶ) ಮಕ್ಯುಲ ಲುಟೆಯ ಎಂದು ಕರೆಯುವರು. ಫೊವೆಯವನ್ನು ನೇರವಾಗಿ ಸುತ್ತುವರೆದ ಪ್ರದೇಶವು ರಾಡ್‌ಗಳ ಹೆಚ್ಚಿನ ಸಾಂದ್ರತೆಯನ್ನು ಹೊಂದಿದ್ದು ಏಕ ಬೈಪೊಲಾರ್‌ಗಳಲ್ಲಿ ಒಮ್ಮುಖವಾಗುತ್ತವೆ. ಕೋನ್‌ಗಳ ಸಂಕೇತಗಳನ್ನು ವಿಲೀನಗೊಳಿಸುವ ಶಕ್ತಿಯು ಅತ್ಯಂತ ಕಡಿಮೆಯಾಗಿದೆ, ಫೊವೆಯ ಕಣ್ಣು ಅತ್ಯಂತ ತೀಕ್ಷ್ಣವಾದ ನೋಟವನ್ನು ಹೊಂದಲು ಸಹಕರಿಸುತ್ತದೆ.[೧]
ಅಂದಾಜು ೧೫೦ ಮಿಲಿಯನ್ ರೆಸೆಪ್ಟಾರ್‌ಗಳಿರುವುದರಿಂದ ಮತ್ತು ಕೇವಲ ೧ ಮಿಲಿಯನ್ ಚಾಕ್ಷುಷ ನರ ಫೈಬರ್‌ಗಳಿರುವುದರಿಂದ, ಮತ್ತು ಸಮತಲ ಮತ್ತು ಅಮಕ್ರಿನ್ ಕೋಶಗಳ ಸಮತಲ ಕ್ರಿಯೆಯು ಒಂದು ರೆಟಿನಾದ ಪ್ರದೇಶವು ಇನ್ನೊಂದನ್ನು ನಿಯಂತ್ರಿಸಲು ಅನುವುಮಾಡಿಕೊಡುತ್ತದೆ (ಉದಾ., ಒಂದುನ್ ಇನ್ನೊಂದನ್ನು ತಡೆಯಲು ಪ್ರಚೋದಿಸುತ್ತದೆ), ಆದ್ದರಿಂದ ಸಂದೇಶಗಳು ಒಮ್ಮುಕವಾಗುತ್ತದೆ ಮತ್ತು ಮಿಶ್ರಗೊಳ್ಳುತ್ತದೆ. ಇನ್ನು ಕೆಲವು ಕೆಳವರ್ಗದ ಕಶೇರುಕಗಳಲ್ಲಿ (ಉದಾ., ಪಾರಿವಾಳ) ಸಂದೇಶಗಳ "ಕೇಂದ್ರಾಪಗಾಮಿ" ನಿಯಂತ್ರಣವಿದೆ, ಅದೆಂದರೆ ಒಂದು ಪದರವು ಇನ್ನೊಂದನ್ನು ನಿಯಂತ್ರಿಸಬಹುದು, ಅಥವಾ ಮೆಡುಳಿನ ಮೇಲಿನ ಪ್ರದೇಶಗಳು ನರ ಕೋಶಗಳನ್ನು ನಿಯಂತ್ರಿಸಬಹುದು, ಆದರೆ ಸಸ್ತನಿ ವರ್ಗದ ಪ್ರಾಣಿಗಳಲ್ಲಿ ಹೀಗಾಗುವುದಿಲ್ಲ.[೧]
ಕಶೇರುಕಗಳಲ್ಲಿನ ರೆಟಿನಾವು ವಿಲೋಮವಾಗಿದ್ದು ಬೆಳಕಿನ ಸಂವಾದಿ ಕೋಶಗಳು ರೆಟಿನಾದ ಹಿಂಬಾಗದಲ್ಲಿರುತ್ತದೆ, ಆದ್ದರಿಂದ ಬೆಳಕಿನ ಕಿರಣಗಳು ರಾಡ್‌ಗಳು ಮತ್ತು ಕೋನ್‌ಗಳನ್ನು ಹಾದುಹೋಗುವ ಮೊದಲು ನ್ಯೂರಾನುಗಳ ಮತ್ತು ಕ್ಯಾಪಿಲರಿ ಪದರಗಳ ಮೂಲಕ ಹಾದುಹೂಗುತ್ತದೆ. . ಇದಕ್ಕೆ ವಿರುದ್ಧವಾಗಿ, ಶಿರಪಾದಿಗಳ ರೆಟಿನಾವು ನ್ಯೂರಾನ್‌ಗಳೊಂದಿಗೆ ಬೆಳಕಿನ ಗ್ರಾಹಕಗಳನ್ನು ರೆಟಿನಾದ ಮುಂಭಾಗದಲ್ಲಿ ಹೊಂದಿದ್ದು ಹಿಂಭಾಗದಲ್ಲಿ ಕ್ಯಾಪಿಲಾಗಳನ್ನು ಹೊಂದಿವೆ. ಇದರಿಂದಾಗಿ ಶಿರಪಾದಿಗಳು ಕುರುಡು ಪ್ರದೇಶವನ್ನು ಹೊಂದಿವೆ.
ಕಶೇರುಕಗಳು ಮಾಡುವಂತೆ ಶಿರಪಾದಿಗಳ ರೆಟಿನಾವು ಮೆದುಳಿನ ಬಾಹ್ಯವೃದ್ಧಿಯಾಗಿದೆ. ಕಶೇರುಕ ಮತ್ತು ಶಿರಪಾದಿಗಳ ಕಣ್ಣುಗಳಲ್ಲಿ ಸಾಮ್ಯತೆ ಇರದಿದ್ದರೂ ಬೇರೆ ಬೇರೆಯಾಗಿ ವಿಕಸಿತಗೊಂಡಿದ್ದಾವೆ ಎಂದು ಈ ವ್ಯತ್ಯಾಸಗಳು ತೋರಿಸುತ್ತದೆಂದು ವಾದಿಸಾಗುತಿತ್ತು. ವಿಕಸನಾ ವಾದದ ಜೀವಶಾಸ್ತ್ರಜ್ಞ ರಿಚರ್ಡ್ ಡಾಕಿನ್ಸ್ ಉದಾಹರಿಸುವಂತೆ ಮಾನವ ರೆಟಿನಾದ ಅಪೂರ್ಣ ರಚನೆಯಾಗಿದ್ದು, ಮಾನವನ ಕಣ್ಣು ಪರಿಪೂರ್ಣವಾಗಿದ್ದು ವಿನ್ಯಾಸಗಾರನನ್ನು ಹೊಂದಿರಬೇಕು ಎನ್ನುವ ಸೃಷ್ಟಿಕಾರರು ಅಥವಾ ಜಾಣ ವಿನ್ಯಾಸದ ಸಿದ್ದಾಂತಕಾರರಿಗೆ ಗೊಂದಲಕ್ಕೀಡು ಮಾಡಿತು.[೪]
2009ರಲ್ಲಿ ಕ್ರೊಜರ್ ಝೀಬ್ರಾಫಿಶ್‌ನ ದೇಹರಚನೆ ಶಾಸ್ತ್ರದ ಪ್ರಕಾರ ವಿಲೋಮ ಜೋಡಣೆಯು ಹೊಂದಿಸುವಂತಿರದಿದ್ದರೂ ಇದು ಬೆಳಕಿನ ಚದುರುವಿಕೆಯನ್ನು ತಡೆಯುವುದನ್ನು ನಿರ್ಮಿಸುತ್ತದೆ (ಇದರಿಂದ ಬೆಳಕಿನ ಕಿರಣವು ನಾಶವಾಗುತ್ತದೆ ಮತ್ತು ಚಿತ್ರವು ಮುಸುಕಾಗುತ್ತದೆ), ಇದು ಸಣ್ಣ ಕಣ್ಣಿನ ಪ್ರಾಣಿಗಳಲ್ಲಿ ಸ್ಥಳವನ್ನುಳಿಸುವ ಅವಕಾಶವನ್ನು ಹೊಂದಿದ್ದು ಕಡಿಮೆ ಪಾರದರ್ಶಕತ್ವವಿದೆ, ಮಸೂರ ಮತ್ತು ಬೆಳಕಿನ ಗ್ರಾಹಕಗಳ ನಡುವಿನ ಪ್ರದೇಶವು ಬೆಳಕಿಗೆ ಸಂವೇದನಾಶೀಲವಾಗಿದ್ದು ಪೂರ್ಣವಾಗಿ ರೆಟಿನಾದ ಕೋಶಗಳಿಂದ ಭರ್ತಿಯಾಗಿದೆ.[೫]
ರೆಟಿನದಲ್ಲಿರುವ ರಾಡ್ ಮತ್ತು ಕೋನ್ ಕೋಶಗಳ ಪ್ರಚೋದನೆಯ ಮೂಲಕ ಚಿತ್ರವನ್ನು ಸೃಷ್ಟಿಸುತ್ತದೆ.
ನರಮಂಡಲದ ಮೂಲಕ ಪ್ರಚೋದನೆಯ ಕಾರ್ಯಾಚರಣೆಯಾಗುತ್ತದೆ ಮತ್ತು ಮಿದುಳಿನಲ್ಲಿ ಹೊರಭಾಗದ ಚಿತ್ರಣವನ್ನು ಮೂಡಿಸಲು ಮಿದುಳಿನ ವಿವಿಧ ಭಾಗಗಳು ಸಮಾನಾಂತರವಾಗಿ ಕೆಲಸಮಾಡುತ್ತವೆ.
ಕೋನ್ ಕೋಶಗಳು ಶುಭ್ರ ಬೆಳಕಿಗೆ ಪ್ರತಿಕ್ರಿಯಿಸುತ್ತವೆ ಮತ್ತು ದಿನದ ಬೆಳಕಿನ ಸಮಯದಲ್ಲಿ ಹೆಚ್ಚು-ಸಾಂದ್ರತೆಯಿರುವ ಬಣ್ಣವನ್ನು ನೋಡಲು ಹೊಂದಾಣಿಕೆ ಮಾಡುತ್ತವೆ (ಫೋಟೊಫಿಕ್ ವಿಜನ್ ಎಂದು ಸಹ ಕರೆಯುತ್ತಾರೆ). ರಾಡ್ ಕೋಶಗಳು ಹಗಲಿನ ಬೆಳಕಿನ ಹಂತಗಳಲ್ಲಿ ಸಂಪೂರಣಗೊಂಡಿರುವುದರಿಂದಾಗಿ ಮತ್ತು ಮಾದರಿ ದೃಷ್ಟಿ ಸಾಮರ್ಥ್ಯಕ್ಕೆ ಕೊಡುಗೆ ನೀಡುವುದಿಲ್ಲ. ಆದಾಗ್ಯೂ, ರಾಡ್ ಕೋಶಗಳು ಮಂದ ಬೆಳಕಿಗೆ ಪ್ರತಿಕ್ರಿಯಿಸುತ್ತವೆ ಮತ್ತು ಬೆಳಕಿನ ಬಹಳ ಕಡಿಮೆ ಹಂತಗಳಲ್ಲಿ ಮೊನೊಕ್ರೊಮ್ಯಾಟಿಕ್ ದೃಷ್ಟಿ ಮತ್ತು ಕಡಿಮೆ-ಸಾಂದ್ರತೆಯನ್ನು ಹೊಂದಿಸುತ್ತದೆ (ಸ್ಕೊಟೊಫಿಕ್ ದೃಷ್ಟಿ ಎನ್ನುವರು).
ಹೆಚ್ಚಿನ ಆಫೀಸುಗಳಲ್ಲಿ ಈ ಎರಡು ಹಂತಗಳ ಮಧ್ಯೆ ಸೆಟ್ ಮಾಡಿರುತ್ತಾರೆ ಮತ್ತು ಇದನ್ನು ಮೆಸೋಫಿಕ್ ದೃಷ್ಟಿ ಎನ್ನುವರು.
ಬೆಳಕಿನ ಈ ಹಂತಗಳಲ್ಲಿ, ರಾಡ್ ಕೋಶಗಳು ಮತ್ತು ಕೋನ್ ಕೋಶಗಳು ಎರಡೂ ಅಸ್ತಿತ್ವದಲ್ಲಿರುವ ಕಣ್ಣಿಗೆ ಸಕ್ರಿಯವಾಗಿ ಮಾದರಿ ಮಾಹಿತಿಯನ್ನು ನೀಡುತ್ತವೆ.
ಈ ಸಂದರ್ಭಗಳಲ್ಲಿ ಮಾದರಿ ದೃಷ್ಟಿಯನ್ನು ಮಾಡಲು ರಾಡ್ ಕೋಶ ಯಾವ ಕೊಡುಗೆಯನ್ನು ನೀಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಬೆಳಕಿನ ವಿವಿಧ ತರಂಗಾಂತರಗಳಿಗೆ ಕೋನ್ ಕೋಶಗಳ ಪ್ರತಿಕ್ರಿಯೆಯನ್ನು ಅವುಗಳ ಸ್ಪೆಕ್ಟ್ರಲ್ ಸೆನ್ಸಿಟಿವಿಟಿ ಎನ್ನುವರು
ಸಾಮಾನ್ಯ ಮಾನವನ ದೃಷ್ಟಿಯಲ್ಲಿ, ಕೋನ್ ಕೋಶದ ಸ್ಪೆಕ್ಟ್ರಲ್ ಸೆನ್ಸಿಟಿವಿಟಿ ಮೂರು ಉಪಗುಂಪುಗಳೊಂದರಲ್ಲಿ ಇರುತ್ತದೆ.
ಇವುಗಳನ್ನು ಕೆಲವೊಮ್ಮೆ ಕೆಂಪು, ಹಸಿರು, ಮತ್ತು ನೀಲಿ ಕೋನ್ ಕೋಶಗಳು ಎನ್ನುವರು ಆದರೆ ಹೆಚ್ಚು ನಿಖರವಾಗಿ ಅವು ಚಿಕ್ಕ, ಮಧ್ಯಮ, ಮತ್ತು ಉದ್ದದ ತರಂಗಾಂತರ ಸೂಕ್ಷ್ಮಗ್ರಾಹಿ ಕೋನ್ ಕೋಶಗಳ ಉಪಗುಂಪುಗಳು.
ಇದು ಒಂದು ಅಥವಾ ಹೆಚ್ಚು ಕೋನ್ ಕೋಶಗಳ ಉಪಗುಂಪುಗಳ ಕೊರತೆ ವ್ಯಕ್ತಿಗಳ ಬಣ್ಣ ಗುರುತಿಸುವಿಕೆಯಲ್ಲಿ ನ್ಯೂನತೆ ಅಥವಾ ವಿವಿಧ ರೀತಿಯ ವರ್ಣಾಂಧತೆಗೆ ಕಾರಣವಾಗುತ್ತದೆ.
ಈ ವ್ಯಕ್ತಿಗಳು ಒಂದು ನಿರ್ದಿಷ್ಟ ಬಣ್ಣದ ವಸ್ತುವನ್ನು ಗುರುತಿಸಲು ಕುರುಡರಾಗಿರುವುದಿಲ್ಲ ಆದರೆ ಸಹಜ ದೃಷ್ಟಿಯಲ್ಲಿ ಜನರು ವ್ಯತ್ಯಾಸ ಕಂಡುಹಿಡಿಯಲು ಸಾಧ್ಯವಾಗುವ ಎರಡು ಬಣ್ಣದ ಗುಂಪುಗಳ ಮಧ್ಯೆ ವ್ಯತ್ಯಾಸ ಗುರುತಿಸಲು ಸಾಧ್ಯವಾಗದೆ ಇರುವ ಅನುಭವವಾಗುತ್ತದೆ.
ಮಾನವರು ಮೂರು ರೀತಿಯ ಕೋನ್ ಕೋಶಗಳನ್ನು ಹೊಂದಿರುತ್ತಾರೆ (ಟ್ರೈಕ್ರೊಮ್ಯಾಟಿಕ್ ವಿಜನ್) ಹೆಚ್ಚಿನ ಇತರ ಸಸ್ತನಿಗಳಲ್ಲಿ ಕೆಂಪು ಸೂಕ್ಷ್ಮಗ್ರಾಹಿ ವರ್ಣದ್ರವ್ಯದ ಕೋನ್ ಕೋಶದ ಕೊರತೆ ಇರುತ್ತದೆ ಮತ್ತು ಆದ್ದರಿಂದ ಅವು ಅತೀ ಕಡಿಮೆ (ಡೈಕ್ರೊಮ್ಯಾಟಿಕ್) ಬಣ್ಣ ಗುರುತಿಸುವ ದೃಷ್ಟಿಯನ್ನು ಹೊಂದಿರುತ್ತವೆ.
ಆದಾಗ್ಯೂ, ಕೆಲವು ಪ್ರಾಣಿಗಳು ನಾಲ್ಕು ಸ್ಪೆಕ್ಟ್ರಲ್ ಉಪಗುಂಪುಗಳನ್ನು ಹೊಂದಿರುತ್ತವೆ, ಉದಾಹರಣೆಗೆ, ಟ್ರೌಟ್ (ಒಂದು ಜಾತಿಯ ದೊಡ್ಡ ಮೀನು) ಹತ್ತಿರ, ಮಧ್ಯಮ, ದೂರದ ಉಪಗುಂಪುಗಳ ಜೊತೆ ಮಾನವರಲ್ಲಿರುವಂತೆ ನೇರಳಾತೀತ ಉಪಗುಂಪನ್ನು ಹೊಂದಿರುತ್ತದೆ. ಕೆಲವು ಮೀನುಗಳು ಬೆಳಕಿನ ಪೋಲಾರೈಸೇಶನ್ ಸಹ ಗ್ರಹಿಸುತ್ತವೆ.
ಒಂದು ಗ್ರಾಹಕದ ಮೇಲೆ ಬೆಳಕು ಬಿದ್ದಾಗ ಇದು ಪ್ರಮಾಣಬದ್ಧವಾದ ಪ್ರತಿಕ್ರಿಯೆಯನ್ನು ಬೈಪೊಲಾರ್ ಕೋಶಗಳಿಗೆ ಕ್ರಮಬದ್ಧವಾಗಿ ಕಳುಹಿಸುತ್ತದೆ ಇದು ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳಿಗೆ ಹೋಗುತ್ತದೆ. ಗ್ರಾಹಕಗಳು ಸಮತಲ ಕೋಶಗಳು ಮತ್ತು ಅಮಕ್ರೈನ್ ಕೋಶಗಳ ಮೂಲಕ 'ಒಂದಕ್ಕೊಂದು ಸಂಪರ್ಕ ಹೊಂದಿವೆ', ಇವು ಗ್ಯಾಂಗ್ಲಿಯಾನ್ ಕೋಶಗಳಿಗೆ ಮೊದಲು ಸಿನಪ್ಟಿಕ್ ಸೂಚನೆಗಳನ್ನು ಪರಿವರ್ತಿಸುತ್ತವೆ. ರಾಡ್ ಕೋಶಗಳು ಮತ್ತು ಕೋನ್ ಕೋಶಗಳು ಸಮ್ಮಿಶ್ರಗೊಂಡು ಸಂಯೋಜಿಸುತ್ತವೆ, ಆದರೂ ರಾಡ್ ಕೋಶಗಳು ಅತ್ಯಂತ ಕಡಿಮೆ ಬೆಳಕಿರುವ ಸಂದರ್ಭಗಳಲ್ಲಿ ಹೆಚ್ಚಾಗಿ ಸಕ್ರಿಯವಾಗಿರುತ್ತವೆ ಮತ್ತು ಹೆಚ್ಚು ಹಗಲಿನ ಬೆಳಕಿನಲ್ಲಿ ಸಂಪೂರಣಗೊಳ್ಳುತ್ತವೆ. ಕೋನ್ ಕೋಶಗಳು ಪ್ರಕಾಶಮಾನವಾದ ಬೆಳಕಿನಲ್ಲಿ ಕಾರ್ಯನಿರ್ವಹಿಸುತ್ತವೆ ಏಕೆಂದರೆ ಅತ್ಯಂತ ಕಡಿಮೆ ಪ್ರಮಾಣದ ಬೆಳಕಿನಲ್ಲಿ ಕೆಲಸ ಮಾಡುವಷ್ಟು ಅವು ಸೂಕ್ಷ್ಮಗ್ರಾಹಿಯಾಗಿರುವುದಿಲ್ಲ.
ಹಾಗಿದ್ದರೂ ಎಲ್ಲವೂ ನರ ಕೋಶಗಳಾಗಿದ್ದರೂ, ಕೇವಲ ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳು ಮತ್ತು ಕೆಲವು ಅಮಾಕ್ರನ್ ಕೋಶಗಳು ಕ್ರಿಯಾಸಂಭಾವ್ಯತೆಯನ್ನು ಸೃಷ್ಟಿಸುತ್ತವೆ. ಬೆಳಕಿನ ಗ್ರಾಹಕಗಳಲ್ಲಿ, ಬೆಳಕಿಗೆ ತೆರೆದುಕೊಳ್ಳುವುದು ಒಂದು ಸರಣಿಯ ಹಂತದ ಬದಲಾವಣೆಗಳಲ್ಲಿ ಪದರವನ್ನು ಹೈಪರ್‌ಪೋಲಾರೈಸ ಮಾಡುತ್ತದೆ.
ಹೊರಗಿನ ಕೋಶದ ಭಾಗ ಒಂದು ಫೊಟೊವರ್ಣದ್ರವ್ಯವನ್ನು ಹೊಂದಿರುತ್ತದೆ. ಕೋಶದ ಒಳಗೆ ಸೈಕ್ಲಿಕ್ ಗೆನೋಸಿನ್ ಮೊನೋಫಾಸ್ಫೆಟ್‌ನ (ಸಿಜಿಎಮ್‌ಪಿ) ಸಾಮಾನ್ಯ ಹಂತಗಳು Na+ ಮಾರ್ಗವನ್ನು ತೆರೆದಿಡುತ್ತದೆ ಮತ್ತು ಹೀಗೆ ಕೋಶವು ವಿಶ್ರಾಂತ ಸ್ಥಿತಿಯಲ್ಲಿ ಡಿಪೋಲಾರೈಸ್ ಆಗುತ್ತದೆ. ಫೋಟಾನ್ ಗ್ರಾಹಕ ಪ್ರೋಟೀನ್‌ಗೆ ಹೊಂದಿದಂತಿರುವ ರೆಟಿನಾಲ್ ಅನ್ನು ಐಸೋಮೆರೈಸ್ ಆಗಲ್ಪಟ್ಟು ಟ್ರಾನ್ಸ್-ರೆಟಿನಾಲ್ ಆಗುವಂತೆ ಮಾಡುತ್ತದೆ. ಇದು ಗ್ರಾಹಕವು ಬಹುಸಂಖ್ಯೆಯ ಜಿ-ಪ್ರೋಟೀನ್‌ಗಳು ಸಕ್ರಿಯಗೊಳ್ಳುವಂತೆ ಮಾಡುತ್ತದೆ. ಇದು ನಂತರದಲ್ಲಿ ಪ್ರೋಟೀನ್‌ನ ಜಿಎ-ಉಪಘಟಕವು ಕೋಶದಲ್ಲಿರುವ cGMP ಗೆ ಅಂಟಿಕೊಂಡು ಅದನ್ನು ಹಾಳುಮಾಡುತ್ತದೆ ಮತ್ತು ಆ ಮೂಲಕ Na+ ಸೈಕ್ಲಿಕ್ ನ್ಯೂಕ್ಲಿಯೋಟೈಡ್-ಗೇಟೆಡ್ ಐಯಾನ್ ಚಾನೆಲ್(CNGs) ಗಳಿಗೆ ಅಂಟಿಕೊಳ್ಳಲಾಗದಂತೆ ಮಾಡುತ್ತದೆ. ಹೀಗೆ ಕೋಶವು ಹೈಪರ್‌ಪೋಲಾರೈಸ್ ಮಾಡಲ್ಪಡುತ್ತದೆ. ಬಿಡುಗಡೆಯಾಗುವ ನರವಾಹಕ ಮೊತ್ತವು ಬೆಳಕು ಹೆಚ್ಚಿರುವಾಗ ಕಡಿಮೆಯಾಗುತ್ತಿದ್ದು, ಬೆಳಕಿನ ಮಟ್ಟ ಕಡಿಮೆಯಾಗುತ್ತಿದ್ದಂತೆ ಇಳಿಯುತ್ತದೆ. ಕಣ್ಣಿನ ನಿಜವಾದ ವರ್ಣದ್ರವ್ಯವು ಹೆಚ್ಚಿನ ಬೆಳಕಿರುವಾಗ ಬಿಳಿಯಾಗಿಬಿಡುತ್ತದೆ ಮತ್ತು ಒಂದು ರಾಸಾಯನಿಕ ಕ್ರಿಯೆಯಲ್ಲಿ ಮತ್ತೆ ರಚನೆಗೊಳ್ಳುತ್ತದೆ, ಆದ್ದರಿಂದ ಪ್ರಖರ ಬೆಳಕಿನಿಂದ ಕತ್ತಲಿಗೆ ಬರುವಾಗ ಕಣ್ಣು ತನ್ನ ಸಂಪೂರ್ಣ ನೋಡುವ ಸಾಮರ್ಥ್ಯವನ್ನು ಪಡೆದುಕೊಳ್ಳಲು ಸುಮಾರು ಮೂವತ್ತು ನಿಮಿಷ ತೆಗೆದುಕೊಳ್ಳಬಹುದು (ನೋಡಿ ಹೊಂದಾಣಿಕೆ (ಕಣ್ಣು)).
ಕೋಶದ ಗ್ರಹಿಸುವ ಜಾಗದ ಆಧಾರದ ಮೇಲೆ ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳಲ್ಲಿ ಎರಡು ರೀತಿಯ ಪ್ರತಿಕ್ರಿಯೆ ಇರುತ್ತದೆ. ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳ ಗ್ರಹಿಸುವ ಸ್ಥಳ ಸುಮಾರು ವೃತ್ತಾಕಾರದ ಹತ್ತಿರ ಒಂದು ಕೇಂದ್ರವನ್ನು ಒಳಗೊಂಡಿರುತ್ತದೆ, ಅಲ್ಲಿ ಕೋಶದ ದಹನದಲ್ಲಿ ಬೆಳಕು ಒಂದು ಪ್ರಭಾವವನ್ನು ಹೊಂದಿರುತ್ತದೆ, ಮತ್ತು ಉಂಗುರದ ಸುತ್ತ, ಕೋಶದ ದಹನದ ಮೇಲಿರುವ ಪ್ರಭಾವಕ್ಕೆ ವಿರುದ್ಧ ಪ್ರಭಾವವನ್ನು ಬೆಳಕು ಹೊಂದಿರುತ್ತದೆ. ON ಕೋಶಗಳಲ್ಲಿ, ಗ್ರಹಿಸುವ ಸ್ಥಳದ ಕೇಂದ್ರದಲ್ಲಿ ಬೆಳಕಿನ ತೀವ್ರತೆಯ ಹೆಚ್ಚಳ ದಹಿಸುವ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ. OFF ಕೋಶಗಳಲ್ಲಿ, ಇದು ಕಡಿಮೆಯಾಗುವಂತೆ ಮಾಡುತ್ತದೆ. ರೇಖಾತ್ಮಕ ಮಾದರಿಯಲ್ಲಿ, ಗೌಸಿಯನ್ಸ್‌ನ ವ್ಯತ್ಯಾಸದ ಮೂಲಕ ಈ ವ್ಯಕ್ತಿಚಿತ್ರದ ಪ್ರತಿಕ್ರಿಯೆಯನ್ನು ಚೆನ್ನಾಗಿ ವಿವರಿಸಲಾಗಿದೆ ಮತ್ತು ಇದು ಎಡ್ಜ್ ದಿಟೆಕ್ಶನ್ ಅಲ್ಗೊರಿದಮ್‌ಗಳಗೆ ಮೂಲವಾಗಿದೆ. ಈ ಸರಳ ವ್ಯತ್ಯಾಸದ ಹೊರತಾಗಿ ಗ್ಯಾಂಗ್ಲಿಯಾನ್ ಕೋಶಗಳನ್ನು ವರ್ಣೀಯ ಸೂಕ್ಷ್ಮತೆ ಮತ್ತು ಸ್ಥಳದ ಸಂಕಲನದ ಪ್ರಕಾರದ ಮೂಲಕ ಸಹ ಬೇರ್ಪಡಿಸಬಹುದು. ಲಿನಿಯರ್ ಸ್ಥಳದ ಸಂಕಲನ ತೋರಿಸುವ ಕೋಶಗಳನ್ನು X ಕೋಶಗಳು ಎನ್ನುವರು (parvocellular, P ಎಂದೂ ಸಹ ಕರೆಯುತ್ತಾರೆ, ಅಥವಾ ಚಿಕ್ಕ ಗ್ಯಾಂಗ್ಲಿಯಾನ್ ಕೋಶಗಳು), ಮತ್ತು ಲಿನಿಯರ್ ಅಲ್ಲದ ಸಂಕಲನವನ್ನು ತೋರಿಸುವ ಕೋಶಗಳು Y ಕೋಶಗಳು (ಮ್ಯಾಗ್ನೋಸೆಲ್ಯುಲರ್, M, ಅಥವಾ parasol ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳು ಎಂದು ಸಹ ಕರೆಯುವರು), ಹಾಗಿದ್ದರೂ X ಮತ್ತು Y ಕೋಶಗಳ (ಬೆಕ್ಕಿನ ರೆಟಿನಾದಲ್ಲಿ) ಮತ್ತು P ಮತ್ತು M ಕೋಶಗಳ ನಡುವಿನ ಹೊಂದಿಕೆ (ಸಸ್ತನಿ ವರ್ಗದ ಪ್ರಾಣಿಯ ರೆಟಿನಾದಲ್ಲಿ) ಒಂದು ಸಲ ತೋರಿದಂತೆ ಸರಳವಾಗಿಲ್ಲ.
ಮಿದುಳಿಗೆ ದೃಷ್ಟಿಯ ಚಿಹ್ನೆಯ ವರ್ಗಾಂತರದಲ್ಲಿ, ದೃಷ್ಟಿಯ ಮಾರ್ಗದಲ್ಲಿ ರೆಟಿನಾ ಲಂಬವಾಗಿ ಎರಡು ವಿಭಾಗವಾಗುತ್ತದೆ, ಒಂದು ಅರ್ಧ ಟೆಂಪರಲ್ (ಕಣತಲೆಗೆ ಹತ್ತಿರ) ಮತ್ತು ಒಂದು ಅರ್ಧ ನಸಲ್ (ಮೂಗಿಗೆ ಹತ್ತಿರ). {1}ಪಾರ್ಶ್ವದ ಜೆನಿಕ್ಯುಲೇಟ್ ದೇಹ{/1}ದಲ್ಲಿ ಹಾದುಹೋಗುವ ಮೊದಲು ಮತ್ತೊಂದು ಕಣ್ಣಿನ ಅರ್ಧ ಟೆಂಪರಲ್‌ನ ನರತಂತುಗಳ ಜೊತೆ ಒಂದಾಗಲು ನಸಲ್ ಅರ್ಧದಿಂದ ನರತಂತುಗಳು ಪಾರ್ಶ್ವ ನೋಟದಲ್ಲಿ ಮಿದುಳನ್ನು ಹಾದುಹೋಗುತ್ತದೆ. ಹಾಗಿದ್ದರೂ ಅಲ್ಲಿ ೧೩೦ ಮಿಲಿಯನ್‌ಗೂ ಹೆಚ್ಚು ಗ್ರಾಹಕಗಳಿರುತ್ತವೆ, ಕೇವಲ ಸುಮಾರು ೧.೨ ಮಿಲಿಯನ್ ಫೈಬರ್‌ಗಳು (ನರತಂತುಗಳು) ಆಪ್ಟಿಕ್ ನರದಲ್ಲಿರುತ್ತವೆ; ರೆಟಿನಾದಲ್ಲಿ ಹೆಚ್ಚಿನ ಪ್ರಮಾಣದ ಪೂರ್ವ-ಕಾರ್ಯಾಚರಣೆಯನ್ನು ಕೈಗೊಳ್ಳಲಾಗುವುದು. ಫೊವೆಯ ಹೆಚ್ಚು ನಿಖರವಾದ ಮಾಹಿತಿಯನ್ನು ಸೃಷ್ಟಿಸುತ್ತದೆ. ದೃಷ್ಟಿ ಸ್ಥಳದ ೦.೦೧% (ದೃಷ್ಟಿ ಕೋನದ ೨° ಕ್ಕಿಂತ ಕಡಿಮೆ) ಆಕ್ರಮಿಸಿದರೂ, ನೋಟದ ನರದಲ್ಲಿನ ೧೦ % ನರತಂತುಗಳು ಫೊವೆಯ ಕ್ಕೆ ಮೀಸಲಾಗಿವೆ. ಫೊವೆಯ ದ ವಿಶ್ಲೇಷಣದ ಮಿತಿ ಸುಮಾರು ೧೦,೦೦೦ ಪಾಯಿಂಟುಗಳು ಎಂದು ಕಂಡುಹಿಡಿಯಲಾಗಿದೆ.
ಬಣ್ಣದ ಹೊರತಾಗಿ ಮಾಹಿತಿಯ ಸಾಮರ್ಥ್ಯ ಪ್ರತಿ ಸೆಕೆಂಡಿಗೆ ೫೦೦,೦೦೦ ಬೈಟ್ಸ್ (ಬೈಟ್ಸ್ ಬಗ್ಗೆ ಹೆಚ್ಚಿನ ಮಾಹಿತಿಗೆ ಮಾಹಿತಿ ಸಿದ್ಧಾಂತವನ್ನು ನೋಡಿ) ಅಥವಾ ಬಣ್ಣವನ್ನು ಒಳಗೊಂಡು ಪ್ರತಿ ಸೆಕೆಂಡಿಗೆ ಸುಮಾರು ೬೦೦,೦೦೦ ಬೈಟ್ಸ್ ಎಂದು ಅಂದಾಜಿಸಲಾಗಿದೆ.
ರೆಟಿನಾ ಕ್ಯಾಮರದ ಹಾಗಲ್ಲ, ಇದು ಕೇವಲ ಚಿತ್ರವನ್ನು ಮಿದುಳಿಗೆ ಕಳುಹಿಸುವುದಿಲ್ಲ. ನೋಟದ ನಾರದ ಸೀಮಿತ ಸಾಮರ್ಥ್ಯದಲ್ಲಿ ಸರಿ ಹೊಂದಲು ರೆಟಿನಾ ಚಿತ್ರದ ಸ್ಥಳದ ಸಂಕ್ಷೆಪಿಸುತ್ತದೆ.
ಸಂಕ್ಷೇಪಿಸುವ ಅವಶ್ಯಕತೆಯಿದೆ ಏಕೆಂದರೆ ಮೇಲೆ ಹೇಳಿದಂತೆ ಅಲ್ಲಿ ಗ್ಯಾಂಗ್ಲಿಯಾನ್ ಕೋಶಗಳಿಗಿಂತ ಫೊಟೊಸೆಪ್ಟಾರ್ ಕೋಶಗಳು ೧೦೦ ಪಟ್ಟು ಹೆಚ್ಚಾಗಿವೆ.
ಕೆಳಗೆ ವಿವರಿಸಿದ ರೀತಿಯಲ್ಲಿ ಬರುವ ಚಿತ್ರಗಳನ್ನು "ಡಿಕೋರಿಲೇಟ್" ಮಾಡುವ ಮೂಲಕ ರೆಟಿನಾ ಹೀಗೆ ಮಾಡುತ್ತದೆ.
ಬೈಪೊಲರ್ ಮತ್ತು ಗ್ಯಾಂಗ್ಲಿಯಾನ್ ಕೋಶಗಳ ಮೂಲಕ ಕಾರ್ಯಗತಗೊಂಡ ಕೇಂದ್ರದಲ್ಲಿ ಸುತ್ತುವರೆದ ರಚನೆಗಳ ಮೂಲಕ ಈ ಕಾರ್ಯಾಚರಣೆಗಳು ಕೈಗೊಳ್ಳುತ್ತವೆ.
ರೆಟಿನಾದಲ್ಲಿ ಎರಡು ರೀತಿಯ ಕೇಂದ್ರ ಸುತ್ತುವರೆದ ರಚನೆಗಳಿವೆ - ಆನ್-ಸೆಂಟರ್ಸ ಮತ್ತು ಆಫ್-ಸೆಂಟರ್ಸ . ಆನ್-ಸೆಂಟರ್ಸ್ ಒಂದು ಧನಾತ್ಮಕ ಕೇಂದ್ರ ಮತ್ತು ಒಂದು ಋಣಾತ್ಮಕ ಸುತ್ತುಗಟ್ಟನ್ನು ಹೊಂದಿವೆ. ಆಫ್-ಸೆಂಟರ್ಸ್ ಇದಕ್ಕೆ ವಿರುದ್ಧವಾಗಿವೆ. ಧನಾತ್ಮಕ ಅಧಿಕಾನುಕೂಲವನ್ನು ಸಾಮಾನ್ಯವಾಗಿ ಉತ್ತೇಜಕ ಎನ್ನುವರು ಮತ್ತು ಋಣಾತ್ಮಕ ಅಧಿಕಾನುಕೂಲವನ್ನು ಸಾಮಾನ್ಯವಾಗಿ ಪ್ರತಿಬಂಧಕ ಎನ್ನುವರು.
ಕೇಂದ್ರವನ್ನು ಸುತ್ತುವರೆದ ಈ ರಚನೆಗಳು ದೈಹಿಕವಲ್ಲ ಅಂದರೆ ಅವುಗಳನ್ನು ನೀವು ಅಂಗಾಂಶದ ಮಾದರಿಯ ಗುರುತಿನ ಮೂಲಕ ಮತ್ತು ರೆಟಿನಾದ ರಚನೆಯನ್ನು ಪರೀಕ್ಷಿಸುವ ಮೂಲಕ ನೋಡಲು ಸಾಧ್ಯವಿಲ್ಲ. ಕೇಂದ್ರ ಸುತ್ತುವರೆದ ರಚನೆಗಳು ತಾರ್ಕಿಕವಾದವುಗಳು (ಅಂದರೆ ಗಣಿತೀಯ ಸಂಗ್ರಹ) ಆದರೆ ಅವು ಗ್ಯಾಂಗ್ಲಿಯಾನ್ ಮತ್ತು ಬೈಪೊಲಾರ್ ಕೋಶಗಳ ನಡುವಿನ ಸಂಪರ್ಕ ಸಾಮರ್ಥ್ಯಗಳ ಮೇಲೆ ಆಧಾರವಾಗಿವೆ. ಗ್ಯಾಂಗ್ಲಿಯಾನ್ ಮತ್ತು ಬೈಪೊಲಾರ್ ಕೋಶಗಳ ನಡುವೆ ಸಿನಾಪ್ಸಿಸ್‌ನಲ್ಲಿ ಆವರಿಸಿರುವ ಅಯಾನು ಚಾನಲ್‌ಗಳ ವಿಧಗಳು ಮತ್ತು ಸಂಖ್ಯೆ ಕೋಶಗಳ ನಡುವಿನ ಸಂಪರ್ಕ ಸಾಮರ್ಥ್ಯಗಳಿಗೆ ಕಾರಣಗಳಾಗಿವೆ ಎಂದು ನಂಬಲಾಗಿದೆ.
ಸ್ಟೆಫನ್ ಕುಫ್ಲರ್, ೧೯೫೦ರ ದಶಕದಲ್ಲಿ ಬೆಕ್ಕುಗಳ ರೆಟಿನಾದಲ್ಲಿ ಈ ಕೇಂದ್ರ ಸುತ್ತುವರೆದ ರಚನೆಗಳನ್ನು ತಿಳಿದುಕೊಳ್ಳಲು ಆರಂಭಿಸಿದ ಮೊದಲ ವ್ಯಕ್ತಿ.
ಕೇಂದ್ರ ಸುತ್ತುವರೆದ ರಚನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅಂಕಿ ಅಂಶಗಳಿಗೆ ರಿಸೆಪ್ಟಿವ್ ಫೀಲ್ಡ್ ನೋಡಿ.
ಉತ್ತಮ ಪರಿಚಯಕ್ಕೆ ಡೇವಿಡ್ ಹುಬೆಲ್‌ರ ಆನ್-ಲೈನ್ ಪುಸ್ತಕದ (ಕೆಳಗೆ ಪಟ್ಟಿಯನ್ನು ಕೊಡಲಾಗಿದೆ) ೩ನೇ ಅಧ್ಯಾಯವನ್ನು ನೋಡಿ.
ಕೇಂದ್ರ ಸುತ್ತುವರೆದ ರಚನೆಗಳು ಡಿಜಿಟಲ್ ಫೋಟೋದಲ್ಲಿನ ಅಂಚನ್ನು ಕಡಿಮೆ ಮಾಡಲು ಅಥವಾ ವೃದ್ಧಿಸಲು ಕಂಪ್ಯೂಟರ್ ಪ್ರೋಗ್ರಾಮಿನಲ್ಲಿ ಉಪಯೋಗಿಸುವ ಅಂಚು ಪತ್ತೆಮಾಡುವ ಅಲ್ಗೊರಿಥಮ್‌ಗೆ ಗಣಿತೀಯವಾಗಿ ಸಮವಾಗಿದೆ. ಹೀಗೆ ರೆಟಿನಾ ಇದರ ದೃಷ್ಟಿಯ ಜಾಗದೊಳಗೆ ವಸ್ತುಗಳ ಅಂಚುಗಳನ್ನು ವೃದ್ಧಿಸಲು ಚಿತ್ರದ ಮೇಲೆ ಕಾರ್ಯಾಚನೆ ಮಾಡುತ್ತದೆ.
ಉದಾಹರಣೆಗೆ, ಒಂದು ನಾಯಿ, ಒಂದು ಬೆಕ್ಕು, ಒಂದು ಕಾರಿನ ಚಿತ್ರದಲ್ಲಿ, ಈ ಚಿತ್ರಗಳ ಅಂಚುಗಳು ಹೆಚ್ಚು ಮಾಹಿತಿಗಳನ್ನು ಒಳಗೊಂಡಿರುತ್ತವೆ. ಮಿದುಳಿನಲ್ಲಿ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು (ಅಥವಾ ಆ ವಿಷಯಕ್ಕೆ ಕಂಪ್ಯೂಟರಿನಲ್ಲಿ) ಒಂದು ನಾಯಿ ಮತ್ತು ಒಂದು ಬೆಕ್ಕಿನಂತಹ ಚಿತ್ರಗಳನ್ನು ಸಂಗ್ರಹಿಸಲು ಮತ್ತು ವರ್ಗೀಕರಿಸಲು, ರೆಟಿನಾ ದೃಶ್ಯದಲ್ಲಿರುವ ವಿವಿಧ ಚಿತ್ರಗಳನ್ನು ಬೇರ್ಪಡಿಸುವುದು ಮೊದಲ ಹಂತ.
ಉದಾಹರಣೆಯಂತೆ, ಕೆಳಗಿನ ಮ್ಯಾಟ್ರಿಕ್ಸ್ ಕಂಪ್ಯೂಟರ್ ಅಲ್ಗೊರಿಥಮ್‌ನ ಹೃದಯ ಭಾಗವಾಗಿದೆ ಅದು ಎಡ್ಜ್ ಡಿಟೆಕ್ಶನ್‌ನ್ನು ನಡೆಸುತ್ತದೆ.
ಈ ಮ್ಯಾಟ್ರಿಕ್ಸ್ ಕೇಂದ್ರ ಸುತ್ತುವರೆದ ರಚನೆಗೆ ಕಂಪ್ಯೂಟರ್‌ನ ಸಮವಾಗಿದೆ.
ಈ ಉದಾಹರಣೆಯಲ್ಲಿ, ಈ ಮ್ಯಾಟ್ರಿಕ್ಸ್‌ನಲ್ಲಿನ ಪ್ರತಿ ಬಾಕ್ಸ್ ಒಂದು ಬೆಳಕಿನ ಗ್ರಾಹಕಗೆ ಸಂಪರ್ಕ ಹೊಂದಿದೆ. ಕೇಂದ್ರದಲ್ಲಿರುವ ಬೆಳಕಿನ ಗ್ರಾಹಕ ಈಗ ಕಾರ್ಯಾಚರಣೆಯಾಗುತ್ತಿರುವ ಗ್ರಾಹಕವಾಗಿದೆ. ಕೇಂದ್ರ ಬೆಳಕಿನ ಗ್ರಾಹಕನ್ನು +೧ ಭಾರದ ಅಂಶದಿಂದ ಗುಣಿಸಲಾಗಿದೆ. ಕೇಂದ್ರಕ್ಕೆ ಸುತ್ತುವರೆದಿರುವ ಬೆಳಕಿನ ಗ್ರಾಹಕಗಳು "ಹೆಚ್ಚು ಹತ್ತಿರದ ನೆರೆಯವರು" ಮತ್ತು ಇವನ್ನು -೧/೮ ನಿಂದ ಗುಣಿಸಲಾಗಿದೆ.
ಈ ಒಂಭತ್ತು ಭಾಗಗಳ ಮೊತ್ತವನ್ನು ಕೊನೆಯದಾಗಿ ಕಂಡುಹಿಡಿಯಲಾಗುತ್ತದೆ.
ಎಡಭಾಗವನ್ನು ಒಂದು ಸಾಲಿನ ಕೊನೆಗೆ ಮತ್ತು ನಂತರ ಮುಂದಿನ ಸಾಲಿನ ಕೆಳಗೆ ಬದಲಾಯಿಸುವ ಮೂಲಕ ಚಿತ್ರದಲ್ಲಿನ ಪ್ರತಿ ಬೆಳಕಿನ ಗ್ರಾಹಕಗೆ ಈ ಸಂಕಲನವನ್ನು ಪುನಃ ಮಾಡಲಾಗುವುದು.
| -೧/೮ | | -೧/೮ | | -೧/೮ |
| -೧/೮ | +೧ | | -೧/೮ |
| -೧/೮ | | -೧/೮ | | -೧/೮ |
ಒಂಭತ್ತು ಬೆಳಕಿನ ಗ್ರಾಹಕಗಳ ಅಂಶಗಳು ಒಂದೇ ಬೆಲೆಯನ್ನು ಹೊಂದಿದ್ದರೆ ಈ ಮ್ಯಾಟ್ರಿಕ್ಸ್‌ನ ಒಟ್ಟೂ ಮೊತ್ತ ಸೊನ್ನೆಯಾಗಿರುತ್ತದೆ. ಫಲಿತಾಂಶ ಸೊನ್ನೆ ಎಂಬುದು ಈ ಚಿಕ್ಕ ಚಿತ್ರ ಒಂದೇ ತರಹ ಇತ್ತು (ಬದಲಾವಣೆಯಿಲ್ಲದ) ಎಂದು ಸೂಚಿಸುತ್ತದೆ.
ಋಣಾತ್ಮಕ ಅಥವಾ ಧನಾತ್ಮಕ ಮೊತ್ತಗಳ ಅರ್ಥ ಒಂಭತ್ತು ಬೆಳಕಿನ ಗ್ರಾಹಕಗಳ ಚಿಕ್ಕ ಪಟ್ಟಿಯಲ್ಲಿ ಏನೋ ಭಿನ್ನವಾಗುತ್ತಿದೆ (ಬದಲಾಗುತ್ತಿದೆ) ಎಂದಾಗುತ್ತದೆ.
ಮೇಲಿನ ಮ್ಯಾಟ್ರಿಕ್ಸ್ ರೆಟಿನಾದ ಒಳಗೆ ನಿಜವಾಗಿ ಏನಾಗುತ್ತದೆ ಎನ್ನುವುದರ ಕೇವಲ ಒಂದು ಅಂದಾಜು. ವ್ಯತ್ಯಾಸಗಳು ಹೀಗಿವೆ:
ಮೇಲಿನ ಉದಾಹರಣೆಯನ್ನು "ಸಮತೋಲನ" ಎನ್ನುವರು. ಸಮತೋಲನ ಶಬ್ದದ ಅರ್ಥವೇನೆಂದರೆ, ಧನಾತ್ಮಕ ಭಾರಗಳು ಮೊತ್ತ ಋಣಾತ್ಮಕ ಭಾರಗಳ ಮೊತ್ತಕ್ಕೆ ಸಮನಾಗಿರುವುದರಿಂದ ಅವು ಪೂರ್ಣವಾಗಿ ನಶಿಸಲ್ಪಡುತ್ತವೆ. ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳು ಬಹುಮಟ್ಟಿಗೆ ಪೂರ್ಣವಾಗಿ ಸಮನಾಗುವುದೇ ಇಲ್ಲ.
ಇನ್‌ಪುಟ್ ಚಿತ್ರದ ಮತ್ತು ಇದನ್ನು ಎಡ್ಜ್ ಡಿಟೆಕ್ಶನ್ ಹೇಗೆ ಬದಲಾಯಿಸುತ್ತದೆ ಎನ್ನುವದರ ಉದಾಹರಣೆ ಇಲ್ಲಿದೆ.
ಒಮ್ಮೆ ಕೇಂದ್ರ ಸುತ್ತುವರೆದ ರಚನೆಗಳ ಮೂಲಕ ಸ್ಥಳೀಯವಾಗಿ ಕೋಡ್ ಮಾಡಲಾದ ಚಿತ್ರ, ಸೂಚನೆಗಳನ್ನು ಕಣ್ಣಿನ ನರದ (ಗ್ಯಾಂಗ್ಲಿಯಾನ್ ಕೋಶಗಳ ನರತಂತುಗಳ ಮೂಲಕ) ಹೊರಗೆ ದೃಷ್ಟಿ ಚಿಯಾಸಮ್ ಮೂಲಕ ಎಲ್‌ಜಿಎನ್‌ಗೆ (ಲ್ಯಾಟರಲ್ ಜಿನಿಕ್ಯುಲೆಟ್ ನ್ಯೂಕ್ಲಸ್) ಕಳುಹಿಸಲಾಯಿತು.
ಎಲ್‌ಜಿಎನ್‌ನ ಸ್ಪಷ್ಟವಾದ ಕಾರ್ಯ ಈ ಸಮಯದಲ್ಲಿ ತಿಳಿದಿಲ್ಲ.
ಎಲ್‌ಜಿಎನ್‌ನ ತಯಾರಿಕೆಯನ್ನು ನಂತರ ತಿರುಗಿ ಮಿದುಳಿಗೆ ಕಳುಹಿಸಲಾಗುತ್ತದೆ. ನಿರ್ದಿಷ್ಟವಾಗಿ ಎಲ್‌ಜಿಎನ್‌ನ ತಯಾರಿಕೆ V೧ ಪ್ರಾಥಮಿಕ ದೃಷ್ಟಿ ಕಾರ್ಟೆಕ್ಸ್ ಹೊರಗೆ "ಹರಡುತ್ತದೆ".
ಸೂಚನೆಯ ಸಂಕ್ಷಿಪ್ತ ಹರಿವು: ಬೆಳಕಿನ ಗ್ರಾಹಕಗಳು → ಬೈಪೊಲಾರ್ → ಗ್ಯಾಂಗ್ಲಿಯಾನ್ → ಚಿಯಾಸಮ್ → ಎಲ್‌ಜಿಎನ್ → V೧ ಕಾರ್ಟೆಕ್ಸ್
ರೆಟಿನಾದ ಮೇಲೆ ಪರಿಣಾಮ ಬೀರಬಹುದಾದ ಅನೇಕ ವಂಶಪಾರಂಪರ್ಯದಿಂದ ಬಂದ ಮತ್ತು ಗಳಿಸಿದ ಕಾಯಿಲೆಗಳು ಮತ್ತು ಅಸ್ವಸ್ಥತೆಗಳೆಂದರೆ:
ರೆಟಿನಾಕ್ಕಾಗುವ ರೋಗಗಳ ರೋಗ ನಿರ್ಣಯ ಮತ್ತು ಅಸ್ವಸ್ಥತೆಗಳನ್ನು ಗುರುತಿಸಲು ಅನೇಕ ವಿಧದ ಸಧನಗಳು ಲಭ್ಯವಿದೆ. ಆಫ್ತಲ್ಮೊಸ್ಕೋಪ್‌ನ್ನು ರೆಟಿನಾವನ್ನು ಪರೀಕ್ಷಿಸಲು ಬಳಸುತ್ತಾರೆ. ಇತ್ತೀಚೆಗೆ, ಅಳವಡಿಸಿಕೊಳ್ಳಬಹುದಾದ ಚಾಕ್ಷುಷವನ್ನು ಜೀವಂತ ಮಾನವನ ರೆಟಿನಾದ ಪತ್ಯೇಕ ರಾಡ್ ಗಳನ್ನು ಮತ್ತು ಕೋನ್‌ಗಳನ್ನು ಚಿತ್ರಿಸಲು ಬಳಸುತ್ತಾರೆ ಮತ್ತು ಸ್ಕಾಟ್‌ಲ್ಯಾಂಡ್‌ಮೂಲದ ಇಂಜಿನಿಯರ್ ತಂತ್ರಜ್ಞಾನವು ರೋಗಿಯ ಪೂರ್ಣ ರೆಟಿನಾವನ್ನು ವೈದ್ಯನು ಯಾವುದೇ ಅಡೆತಡೆಗಳಿಲ್ಲದೆ ಗುರುತಿಸಲು ಸಹಾಯಮಾಡುತ್ತದೆ.[೭]
ಎಲೆಕ್ಟ್ರೊರೆಟಿನೊಗ್ರಮ್‌ನ್ನು ಆಕ್ರಮಣಶೀಲವಲ್ಲದ ಕೆಲವೊಂದು ರೋಗಗಳಿಂದ ಹಾನಿಗೊಳಾದ ರೆಟಿನಾದ ವಿದ್ಯುನ್ಮಾನ ಕ್ರಿಯೆಯನ್ನು ಅಳೆಯಲು ಬಳಸುತ್ತಾರೆ. ಆಪ್ಟಿಕಲ್ ಕೊಹರೆನ್ಸ್ ಥೆರಪಿ (OCT)ಯು ಹೊಸದಾದರೂ ಎಲ್ಲೆಡೆ ಲಭ್ಯವಿದೆ. ಈ ಆಕ್ರಮಣಶೀಲವಲ್ಲದ ತಂತ್ರಜ್ಞಾನವು ರೆಟಿನಾದ ೩Dಯ ಗಾತ್ರದ ಅಥವಾ ಹೆಚ್ಚಿನ ವಿಶ್ಲೇಷಣದ ಅಡ್ಡಕತ್ತರಿಸಿದ ತಲಲೇಖದ ನೀಟಾದ ಚಿತ್ರವನ್ನು ಊತಕಶಾಸ್ತ್ರೀಯವಾದ-ಗುಣಮಟ್ಟದೊಂದಿಗೆ ಒದಗಿಸುತ್ತದೆ.
ಚಿಕಿತ್ಸೆಯು ರೋಗದ ಅಥವಾ ಅಸ್ವಸ್ಥತೆಯ ಸ್ವಭಾವವನ್ನವಲಂಬಿಸಿರುತ್ತದೆ. ರೆಟಿನಾದ ಕಸಿ ಮಾಡುವುದನ್ನು ಪ್ರಯತ್ನಿಸಲಾಯಿತಾದರೂ ಅಷ್ಟೇನೂ ಯಶಸ್ವಿಯಾಗಿಲ್ಲ. ಸೌತರ್ನ್ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದ ಎಮ್‌ಐಟಿಯಲ್ಲಿ, ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ,ಒಂದು "ಕೃತಕ ರೆಟಿನಾ"ವನ್ನು ಅಭಿವೃದ್ಧಿಗೊಳಪಡಿಸಲಾಯಿತು: ರೆಟಿನಾದ ಫೋಟೊರೆಸೆಪ್ಟಾರನ್ನು ಬೈಪಾಸ್ ಮಾಡುವುದನ್ನು ಅಳವಡಿಸಲಾಯಿತು ಮತ್ತು ಅಂಕೀಯ ಕ್ಯಾಮರಾದ ಸಂಕೇತಗಳೊಂದಿಗೆ ಅಳವಡಿಸಿದ ನರವನ್ನು ನೇರವಾಗಿ ಉತ್ತೇಜಿಸುವಂತೆ ಮಾಡಲಾಯಿತು.
ನೇತ್ರದ ಅಪಧಮನಿಯಿಂದ ಎರಡು ರೀತಿಯಲ್ಲಿ ರಕ್ತ ಸಂಚಾರಗಳಾಗುತ್ತದೆ. ಕಣ್ಣಿನಲ್ಲಿನ ರಕ್ತ ಪರಿಚಲನೆಯಲ್ಲಿ ಆಪ್ಟಿಕ್ ನರಗಳ ಹೊರಗೆ ಗೋಳವನ್ನು ಪ್ರವೇಶಿಸುವ ಅಪದಮನಿಗಳನ್ನು ಹೊಂದಿದ್ದು, ಅವು ರೆಟಿನಾದ ಹೊರಗಿನ ಮತ್ತು ಮಧ್ಯದ ಪದರಗಳಿಗೆ ರಕ್ತಸಂಚಾರವನ್ನು ಉಂಟುಮಾಡುತ್ತವೆ.
ರೆಟಿನಾದ ಕೇಂದ್ರ ಅಪಧಮನಿಯೆಂದು ಕರೆಯುವ ಕಣ್ಣಿನ ಅಪಧಮನಿಯ ಕವಲಿನ ಮೂಲಕ ರೆಟಿನಾದಲ್ಲಿನ ಸಂಚಾರವು ರೆಟಿನಾದ ಒಳಪದರ ಮತ್ತು ಆಪ್ಟಿ ನರದ ಮೂಲಕ ಆಗುತ್ತದೆ.[೧] ರೆಟಿನಾದಲ್ಲಿನ ರಕ್ತನಾಳಗಳ ಎಕೈಕ ರಚನೆಯನ್ನು ಬಯೊಮೆಟ್ರಿಕ್ ಗುರುತಿಸುವಿಕೆಯಲ್ಲಿ ಬಳಸುತ್ತಾರೆ.
ಜಾರ್ಜ್ ವಾಲ್ಡ್, ಹಾಲ್ಡನ್ ಕೆಫೆರ್ ಹರ್ಟ್‌ಲೈನ್ ಮತ್ತು ರಾಗ್‌ನರ್ ಗ್ರನೀತ್ ೧೯೬೭ರಲ್ಲಿ ಶರೀರಶಾಸ್ತ್ರ ಅಥವಾ ವೈದ್ಯಕೀಯದಲ್ಲಿ ನೊಬೆಲ್ ಬಹುಮಾನವನ್ನು ಅವರ ರೆಟಿನಾದ ಮೇಲಿನ ವೈಜ್ಞಾನಿಕ ಸಂಶೋಧನೆಗಾಗಿ ಪಡೆದರು.
ಇತ್ತೀಚಿನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನವು ಮಾನವನ ಅಂದಾಜು ಆವರ್ತನ ಶ್ರೇಣಿಯು ೮.೭೫ ಸೆಕೆಂಡಿಗೆ ಮೆಗಾಬೈಟ್ಸ್ ಆಗಿದೆ, ಅದರಂತೆ ಗೀನಿ ಹಂದಿಯ ರೆಟಿನಾವು ೮೭೫ ಕಿಲೋಬೈಟ್ಸ್‌ವರೆಗೂ ವಿಸ್ತರಿಸಬಲ್ಲಾಗಿದೆ.[೮]
ಮ್ಯಾಕ್‌ಲರೆನ್ & ಪಿಯರ್‌ಸನ್ ಮತ್ತು ಸಹೋದ್ಯೋಗಿಗಳು ಯುನಿವರ್ಸಿಟಿ ಕಾಲೇಜ್ ಲಂಡನ್ ಮತ್ತು ಲಂಡನ್ನಿನಲ್ಲಿರುವ ಮೂರ್‌ಫೀಲ್ಡ್ ಕಣ್ಣಿನ ಆಸ್ಪತ್ರೆಯಲ್ಲಿ ೨೦೦೬ರಲ್ಲಿ ಇಲಿಯ ರೆಟಿನಾಕ್ಕೆ ದಾನಿಯ ಫೊಟೊರೆಸೆಪ್ಟಾರ್ ಕೋಶಗಳನ್ನು ಸಮರ್ಥವಾಗಿ ಕಸಿಮಾಡಿದರು.[೯] ಇತ್ತೀಚೆಗೆ ಡಬ್ಲಿನ್‌ನಲ್ಲಿ ಮತ್ತು ಸಹೋದ್ಯೋಗಿಗಳು ವಿದ್ಯುನ್ಮಾನ ಸೂಕ್ಷ್ಮದರ್ಶಕವನ್ನು ಉಪಯೋಗಿಸಿ ಕಸಿಮಾಡಿದ ಫೊಟೊರಿಸೆಪ್ಟಾರ್‌ಗಳನ್ನು ರಚಿಸಿ ಸಿನಾಪ್ಟಿಕ್ ಬಂಧಕಗಳನ್ನೇರ್ಪಡಿಸಿದರು.[೧೦]
ಜೀನು ಚಿಕಿತ್ಸೆಯು ಅನೇಕ ರೆಟಿನಾದ ರೋಗಗಳನ್ನು ಗುಣಪಡಿಸುವ ಭರವಸೆಯನ್ನು ಮೂಡಿಸಿದೆ. ರೆಟಿನಾದ ಭಾಗವಾಗಿ ಇದು ಸೋಂಕಾಗದ ವೈರಸನ್ನು ಜೀನಿನಲ್ಲಿ ಬಳಸುವುದನ್ನೊಳಗೊಳ್ಳುತ್ತದೆ. ರಿಕಾಂಬಿನಂಟ್ ಅಡೆನೊ-ಅಸೋಸಿಯೇಟೆಡ್ ವೈರಸ್ (rAAV) ವೆಕ್ಟರ್‌ಗಳ ಕೆಲವು ಮುಖಲಕ್ಷಣಗಳು ರೆಟಿನಾದ ಜೀನು ಚಿಕಿತ್ಸೆಗೆ ಸೂಕ್ತವಾದುದಾಗಿದೆ, ಇದರಲ್ಲಿ ಪ್ಯಾಥೊಜೆನಿಸಿಟಿಯ ಕೊರತೆ, ಇಮ್ಯುನೊಜೆನಿಸಿಟಿ, ಮತ್ತು ಪೋಸ್ಟ್‌ಮಿಟೊಟಿಕ್ ಕೋಶಗಳ ಟ್ರಾನ್ಸ್‌ಕೇಡ್ ಸಾಮರ್ಥ್ಯವು ಸ್ಥಿರವಾಗಿದ್ದು ಸಮರ್ಥವಾಗಿರುತ್ತದೆ.[೧೧] ರಾವ್ ವೆಕ್ಟರ್‌ಗಳನ್ನು ಹೆಚ್ಚಾಗಿ ರೆಟಿನಲ್ ಪಿಗ್ಮೆಂಟ್ ಎಪಿಥೇಲಿಯಮ್ (RPE), ಫೊಟೊಸೆಪ್ಟಾರ್ ಕೋಶಗಳು ಮತ್ತು ರೆಟಿನಲ್ ಗ್ಯಾಂಗ್ಲಿಯಾನ್ ಕೋಶಗಳ ಸಮರ್ಥ ಟ್ರಾನ್ಸ್‌ಡಕ್ಷನ್‌ನನ್ನು ಮಧ್ಯಸ್ಥಿಕೆ ವಹಿಸುವ ಸಾಮರ್ಥ್ಯಕ್ಕಾಗಿ ಬಳಸುತ್ತಾರೆ. ಪ್ರತಿಯೊಂದು ಕೋಶವನ್ನೂ ನಿರ್ಧಿಷ್ಟವಾದ ಎಎವಿ ಸೆರೊಟೈಪ್‌ಗಳನ್ನು, ಪ್ರವರ್ತಕ, ಮತ್ತು ಕಣ್ಣಿನೊಳಗಿನ ಇಂಜೆಕ್ಷನ್ ಸ್ಥಳವನ್ನು ನಿರ್ಧಿಷ್ಟವಾಗಿ ಆಯ್ದುಕೊಳ್ಳುವ ಮೂಲಕ ಅವುಗಳ ಮೇಲೆ ಕಾರ್ಯ ನಿರ್ವಹಿಸಬಹುದಾಗಿದೆ.
ರೆಟಿನಾದ ರಚನೆ ಮತ್ತು ಅದರ ಸಂಬಂಧಿತ ಇಮ್ಯೂನ್-ಪ್ರಿವಿಲೇಜ್ಡ್ ವಾತಾವರಣವು ಈ ವಿಧಾನಕ್ಕೆ ಸಹಕಾರಿಯಾಗಿದೆ. ಟೈಟ್ ಜಂಕ್ಷನ್‌ಗಳು ರೆಟಿನಾದ ರಕ್ತ ಸಂಚಾರಕ್ಕೆ ತಡೆಯನ್ನೊಡ್ಡಿ ಸಬ್ರೆಟಿನಲ್ ಸ್ಥಳವನ್ನು ರಕ್ತಪೂರೈಕೆಯಿಂದ ಬೇರೆಯಾಗಿರುತ್ತದೆ, ಆದ್ದರಿಂದ ಇದನ್ನು ಮೈಕ್ರೋಬ್‌ಗಳಿಂದ ಮತ್ತು ಹೆಚ್ಚಿನ ಇಮ್ಯೂನ್-ಮಧ್ಯವರ್ತಿಸಿದ ಹಾನಿಗಳಿಂದ ರಕ್ಷಿಸುತ್ತದೆ, ಮತ್ತು ಮತ್ತು ಇದರ ಸಾಮರ್ಥ್ಯವನ್ನು ವೆಕ್ಟರ್-ಮಧ್ಯವರ್ತಿಸಿದ ಚಿಕಿತ್ಸೆಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಣ್ಣಿನ ವಿಭಾಗಿಸಲ್ಪಟ್ಟ ರಚನೆಯು ಚಿಕಿತ್ಸಾ ವೆಕ್ಟರ್ ನಿಲುಗಡೆಯ (ಥೆರಾಪೆಟಿಕ್ ವೆಕ್ಟರ್ ಸಸ್ಪೆನ್ಶನ್) ನಿರ್ಧಿಷ್ಟವಾದ ಕೋಶಗಳಿಗೆ ನಿಖರವಾದ ಮಾಹಿತಿಯನ್ನೊದಗಿಸುತ್ತದೆ, ಇದು ನೇರವಾದ ವಿಶ್ಲೇಷಣೆಯಡಿಯಲ್ಲಿ ಮೈಕ್ರೊಸರ್ಜಿಕಲ್ ತಂತ್ರಜ್ಞಾನವನ್ನೊದಗಿಸುತ್ತದೆ.[೧೨] ರೆಟಿನಾದ ರಕ್ಷಣೆಯಲ್ಲಿ, AAV ವೆಕ್ಟರ್‌ಗಳು ರೆಟಿನಲ್ ಪಿಗ್ಮೆಂಟೆಡ್ ಎಪಿಥೇಲಿಯಮ್ (RPE), ಫೊಟೊರಿಸೆಪ್ಟಾರ್, ಅಥವಾ ಗ್ಯಾಂಗ್ಲಿಯನ್ ಕೋಶಗಳಲ್ಲಿ ಒಂದು ಚಿಕಿತ್ಸೆಯ ನಂತರ ಬಹಳ ಕಾಲದವರೆಗೂ ಹೆಚ್ಚಿನ ಟ್ರಾನ್ಸ್‌ಜೀನಿನ ಅಭಿವ್ಯಕ್ತಿಯನ್ನು ಹೊಂದಲು ಸಾಧ್ಯವಾಗುತ್ತದೆ. ಇದಲ್ಲದೆ ಕಣ್ಣು ಮತ್ತು ನೋಡುವ ವ್ಯವಸ್ಥೆಯನ್ನು ನೋಡುವ ಕ್ರಿಯೆ ಮತ್ತು ಚುಚ್ಚುಮದ್ದಿನ ನಂತರದ ರೆಟಿನಾದ ರಚನೆಯಲ್ಲಿನ ವ್ಯತ್ಯಾಸಗಳಿಗಾಗಿ ಆಕ್ರಮಣಶೀಲವಲ್ಲದ ಆಧುನಿಕ ತಂತ್ರಜ್ಞಾನಗಳಾದ ಕಂಟ್ರಾಸ್ಟ್ ಸೆನ್ಸಿಟಿವಿಟಿ, ಫಂಡಸ್ ಆಟೊ-ಫುರೆಸೆನ್ಸ್(FAF), ಡಾರ್ಕ್ ಅಡಾಪ್ಟೆಡ್ ವಿಶ್ಯುಯಲ್ ಥ್ರೆಶೋಲ್ಡ್‌ಗಳು, ವಸ್ಕ್ಯುಲಾರ್ ಡಯಾಮೀಟರ್‌ಗಳು, ಪುಪಿಲೊಮೆಟ್ರಿ, ಎಲೆಕ್ಟ್ರೊರೆಟಿನಾಗ್ರಫಿ, ಮಲ್ಟಿಫೋಕಲ್ ಇಆರ್‌ಜಿ ಮತ್ತು ಆಪ್ಟಿಕಲ್ ಕೊಹಿರೆನ್ಸ್ ಟೊಮೊಗ್ರಫಿ (OCT)ಗಳಂತವುಗಳಿಂದ ಸುಲಭವಾಗಿ ಮತ್ತು ದಿನವೂ ಲಕ್ಷ್ಯವಿಡಬಹುದು.[೧೩]
ಇದು ವಯಸ್ಸಿಗೆ ಸಂಬಂಧಿತ ಮಕ್ಯುಲಾರ್ ಡಿಜನರೇಶನ್, ಮಧುಮೇಹದ ರೆಟಿನೋಪತಿ ಮತ್ತು ಪ್ರಿಮೆಚ್ಯುರಿಟಿಯ ರೆಟಿನೊಪತಿಗಳಿಗೆ ಕಾರಣವಾಗುವ ನಿಯೊವಸ್ಕ್ಯುಲಾರ್ ರೋಗಗಳನ್ನೊಳಗೊಂಡಂತೆ ರೆಟಿನಾದ ರೋಗಗಳ ವಿರುದ್ಧದ ಅಧ್ಯಯನಕ್ಕೆ ಪರಿಣಾಮಕಾರಿಯಾಗಿದೆ. ಬೆಳೆದ ರೆಟಿನಾದಲ್ಲಿನ ವಸ್ಕುಲಾರೈಸೇಶನ್‌ನ ನಿಯಂತ್ರಣವು ಧನಾತ್ಮಕ ಎಂಡೋಜೀನಸ್ ಬೆಳವಣಿಗೆಯ ಅಂಶಗಳಾದ ವಸ್ಕ್ಯುಲಾರ್ ಎಂಡೋಥೇಲಿಕಲ್ ಬೆಳವಣಿಗೆಯ ಅಂಶ (VEGF) ಮತ್ತು ಆಯ್‌೦ಜಿಯೊಜೆನಿಸಿಸ್‌ನ ಪ್ರತಿರೋಧಕಗಳಾದ ಪಿಗ್ಮೆಂಟ್ ಎಪಿಥೇಲಿಯಮ್-ಡಿರೈವ್ಡ್ ಅಂಶ (PEDF), rAAV-ಮಧ್ಯವರ್ತಿಸಿದ PEDFನ ಅಭಿವ್ಯಕ್ತಿ, ಆಯ್೦ಜಿಯೊಸ್ಟೈನ್, ಮತ್ತು ಕರಗಬಲ್ಲ VEGF ರಿಸೆಪ್ಟಾರ್ sFlt-೧ಗಳಂತಹ ಎಲ್ಲಾ ಆಯ್‌೦ಟಿಯಾಂಜಿಯೊಜೆನಿಕ್ ಪ್ರೊಟೀನುಗಳ ನಡುವಿನ ಸಮತೋಲನವನ್ನೊಳಗೊಳ್ಳುತ್ತದೆ, ಇದನ್ನು ಪ್ರಣಿಗಳ ಮಾದರಿಗಳಲ್ಲಿ ಹಾಳಾದ ರಕ್ತನಾಳಗಳ ರಚನೆಯನ್ನು ಕಡಿಮೆಮಾಡಲು ತೋರಿಸಲಾಗುತ್ತದೆ.[೧೪] ಕೆಲವು ರೆಟಿನಾದ ಡೈಸ್ಟ್ರೋಫಿ (ಪೋಷಕಾಂಶ ಕೊರತೆಯಿಂದ ಉಂಟಾಗುವ ಅಂಗನ್ಯೂನ್ಯತೆ)ಯಿರುವ ರೋಗಿಗಳಿಗೆ ನಿಖರವಾದ ಜೀನು ಚಿಕಿತ್ಸೆಯನ್ನು ಕೊಡಲಾಗುವುದಿಲ್ಲ, ಹೀಗಾಗಿ ಹೆಚ್ಚು ಸಾಮಾನ್ಯವಾಗಿ ಬಳಸಬಹುದಾದ ಉಳಿದಿರುವ ಅಂಶದ ಚಿಕಿತ್ಸೆಯೆಡೆಗೆ ಹೆಚ್ಚಿನ ಗಮನಹರಿಸಲಾಗುತ್ತಿದೆ. ಕಣ್ಣಿನಲ್ಲಿ ಇರುವ ಕೋಶಗಳನ್ನು ನಿರ್ವಹಿಸಲು ಮತ್ತು ಹಾನಿಗೊಳಗಾದ ನರಕೋಶದ ಕೋಶಗಳ ಸಂಖ್ಯೆಗಳಿಗಾಗಿ ನ್ಯೂರೊಟ್ರೋಫಿಕ್ ಅಂಶಗಳು ಅಭಿವೃದ್ಧಿಯಾಗುವಾಗ ನರಕೋಶಕ್ಕೆ ಸಂಬಂಧಿಸಿದ ಬೆಳವಣಿಗೆಯನ್ನು ನಿಯಂತ್ರಿಸಬಲ್ಲುದಾಗಿದೆ. AAV ಸಂಕೇತೀಕರಣದ ನ್ಯೂರೊಟ್ರಾಫಿಕ್ ಅಂಶಗಳಾದ ಫೈಬ್ರೊಬ್ಲಾಸ್ಟ್ ಬೆಳವಣಿಯ ಅಂಶ(FGF)ದ ಕುಟುಂಬ ಸದಸ್ಯರು ಮತ್ತು GDNFಗಳು ಅಪೊಪ್ಟೋಸಿಸ್‌ನಿಂದ ಫೊಟೊರೆಸೆಪ್ಟಾರ್‌ಗಳನ್ನು ರಕ್ಷಿಸುತ್ತದೆ ಅಥವಾ ಕೋಶಗಳ ಸಾವನ್ನು ಕಡಿಮೆಮಾಡುತ್ತದೆ.[೧೪]
ವಂಶಪಾರಂಪರ್ಯದಿಂದ ಬಂದ ರೆಟಿನಾದ ನ್ಯೂನ್ಯತಾ ರೋಗಗಳ ಚಿಕಿತ್ಸೆಯಾದ ರೆಟಿನಿಟಿಸ್ ಪಿಗ್ಮೆಂಟೋಸ ಮತ್ತು ಲೆಬೆರ್ ಕಾಂಜೆನ್ಶಿಯಲ್ ಅಮೌರೊಸಿಸ್(LCA)ಗಳನ್ನು ಜೀನು ಬದಲಾವಣಾ ಚಿಕಿತ್ಸೆಯ ಮೂಲಕ ನಿಯೋಜಿಸಲಾಗುತ್ತದೆ, ಆದ್ದರಿಂದ ಈ ವಿಧಾನವವು ಆಟೊಸೊಮಲ್ ರೆಸೆಸ್ಸಿವ್ ರೆಟಿನಾದ ಕಾಯಿಲೆಗೆ ಚಿಕಿತ್ಸೆಯಾಗಿ ನಂಬಿಕಾರ್ಹವಾಗಿದೆ. ಲೆಬೆರ್ ಕಾಂಜೆನ್ಶಿಯಲ್ ಅಮೌರೊಸಿಸ್ (LCA೨) RPE೬೫ ಜೀನಿನ ನ್ಯೂನ್ಯತೆಯಾಗಿದ್ದು, {2}ನೋಟದ ಫೊಟೊಟ್ರಾನ್ಸ್‌ಡಕ್ಷನ್{/2}ನಲ್ಲಿನ ಪ್ರಮುಖ ಅಣುವಾದ ೧೧-cis ರೆಟಿನಾದ ವಿಶ್ಲೇಷಣೆಗೆ ಕಾರಣವಾಗಿದೆ, ಮತ್ತು ಜೀನು ಸ್ಥಳಾಂತರದ ಚಿಕಿತ್ಸೆಯ ಅಧ್ಯಯನವು {3}rpe೬೫{/3}- ಸಂಕೇತೀಕರಣದ AAVಯನ್ನು ಬಳಸಿ ಮಾನವ ಮಾದರಿಯಲ್ಲಿ ಆಶಾದಾಯಕ ಪಲಿತಾಂಶವನ್ನು ಪಡೆಯಬಹುದಾಗಿದೆ.{4/} ಪ್ರಾಣಿಗಳ ಮಾದರಿಗಳ ಅನೇಕ ಪ್ರೊತ್ಸಾಹಕ ವರದಿಗಳ ಆಧಾರದಲ್ಲಿ, RPE೬೫ cDNA ಹೊಂದಿದ ಪರಿವರ್ತಿಸಿದ AAV ವೆಕ್ಟರ್ ಗಳನ್ನು ಬಳಸಿ ಮಾಡುವ LCA ಯ ಚಿಕಿತ್ಸೆಗಾಗಿ ಕನಿಷ್ಟ ಮೂರು ವೈದ್ಯಕೀಯ ಪ್ರಯೋಗಗಳನ್ನು ಪ್ರಸ್ತುತವಾಗಿ ನಡೆಸಲಾಗುತ್ತಿದೆ.
An engineer would laugh at any suggestion that the photocells might point away from the light, with their wires departing on the side nearest the light. Yet this is what happens in all vertebrate retinas. The wire has to travel over the surface of the retina to a point where it dives through a hole in the retina, (the so-called blind spot) to joint the optic nerve. Light..has to pass through a forest of connecting wires, presumably suffering at least some attenuation and distortion....the principle of the thing would offend any tidy-minded engineer
{{cite book}}
: Unknown parameter |ISBN status=
ignored (help){{cite journal}}
: CS1 maint: multiple names: authors list (link) CS1 maint: unflagged free DOI (link)