Type a search term to find related articles by LIMS subject matter experts gathered from the most trusted and dynamic collaboration tools in the laboratory informatics industry.
ಅಧ್ಯಕ್ಷ (ಸಭಾಧ್ಯಕ್ಷ) ಮಂಡಳಿ, ಸಮಿತಿ, ಅಥವಾ ಪರ್ಯಾಲೋಚಕ ಸಭೆಯಂತಹ ಒಂದು ಸಂಘಟಿತ ಗುಂಪಿನ ಅತ್ಯಂತ ಉನ್ನತ ಅಧಿಕಾರಿ. ಅಧಿಕಾರದಲ್ಲಿರುವ ವ್ಯಕ್ತಿಯನ್ನು ಸಾಮಾನ್ಯವಾಗಿ ಗುಂಪಿನ ಸದಸ್ಯರು ಆಯ್ಕೆಮಾಡುತ್ತಾರೆ ಅಥವಾ ನೇಮಿಸುತ್ತಾರೆ. ಅಧ್ಯಕ್ಷನು ಸೇರಿದ ಗುಂಪಿನ ಸಭೆಗಳ ಅಧ್ಯಕ್ಷತೆ ವಹಿಸುತ್ತಾನೆ ಮತ್ತು ಅದರ ವ್ಯವಹಾರವನ್ನು ಕ್ರಮಬದ್ಧವಾದ ರೀತಿಯಲ್ಲಿ ನಡೆಸುತ್ತಾನೆ.[೧] ಗುಂಪು ಅಧಿವೇಶನದಲ್ಲಿರದಿರುವಾಗ, ಅಧಿಕಾರಿಯ ಕರ್ತವ್ಯಗಳು ಹಲವುವೇಳೆ ಅದರ ಮುಖ್ಯಸ್ಥನಾಗಿ, ಬಾಹ್ಯ ಪ್ರಪಂಚಕ್ಕೆ ಅದರ ಪ್ರತಿನಿಧಿಯಾಗಿ ಮತ್ತು ಅದರ ವಕ್ತಾರನಾಗಿ ನಡೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ಕೆಲವು ಸಂಸ್ಥೆಗಳಲ್ಲಿ, ಈ ಸ್ಥಾನವನ್ನು ಸಭಾಧ್ಯಕ್ಷ ಸ್ಥಾನವೆಂದೂ ಕರೆಯಲಾಗುತ್ತದೆ.
ಕೆಲವೊಮ್ಮೆ, ಸಭಾಧ್ಯಕ್ಷನಿಗೆ ನೆರವು ನೀಡಲು ಮತ್ತು ಸಭಾಧ್ಯಕ್ಷನ ಗೈರುಹಾಜರಿಯಲ್ಲಿ ಸಭಾಧ್ಯಕ್ಷನಾಗಿ ಕಾರ್ಯನಿರ್ವಹಿಸಲು, ಅಥವಾ ಸಭಾಧ್ಯಕ್ಷನನ್ನು ಒಳಗೊಂಡ ಗೊತ್ತುವಳಿಯನ್ನು ಚರ್ಚಿಸಲಾಗುತ್ತಿರುವಾಗ ಸಭಾಧ್ಯಕ್ಷನ ಅಧೀನದಲ್ಲಿರುವ ಉಪ ಸಭಾಧ್ಯಕ್ಷನನ್ನು ಚುನಾಯಿಸಲಾಗುತ್ತದೆ. ಸಭಾಧ್ಯಕ್ಷ ಮತ್ತು ಉಪ ಸಭಾಧ್ಯಕ್ಷರ ಗೈರುಹಾಜರಿಯಲ್ಲಿ, ಒಂಟಿ ಸಭೆಯಲ್ಲಿ ಆ ಪಾತ್ರವನ್ನು ತುಂಬಲು ಗುಂಪುಗಳು ಕೆಲವೊಮ್ಮೆ ತತ್ಕಾಲ ಸಭಾಧ್ಯಕ್ಷನನ್ನು ಚುನಾಯಿಸುತ್ತಾರೆ.
ಸಾರ್ವಜನಿಕ ಸಂಸ್ಥೆಗಳಲ್ಲಿ ಮೂರು ಸಾಮಾನ್ಯ ಬಗೆಯ ಅಧ್ಯಕ್ಷರಿರುತ್ತಾರೆ.
{{cite book}}
: Invalid |ref=harv
(help)