Informatics Educational Institutions & Programs
ಪರಿವಿಡಿ
Yellow fever | |
---|---|
Classification and external resources | |
ICD-10 | A95 |
DiseasesDB | ೧೪೨೦೩ |
MedlinePlus | ೦೦೧೩೬೫ |
eMedicine | med/೨೪೩೨ emerg/645 |
MeSH | D೦೧೫೦೦೪ |
ಕಾಮಾಲೆ ಒಂದು ತೀವ್ರವಾದ ವೈರಲ್ ಹೆಮೋರಾಜಿಕ್ ಕಾಯಿಲೆಯಾಗಿದೆ.[೧] ಫ್ಲಾವಿವೈರಡೆ ತಳಿಯ ಗುಣಾತ್ಮಕ ಪ್ರಜ್ಞೆಯ ಹಾಗೂ RNA ರೋಗಾಣುಗಳಿಂದ ಸುತ್ತುಗೊಂಡಿರುವ ೪೦ರಿಂದ ೫೦ nmರಷ್ಟು ಗಾತ್ರ ಹೊಂದಿರುವ ರೋಗಾಣು ಇದಾಗಿದೆ.
ಕಾಮಾಲೆ ತರುವ ವೈರಸ್, (ಕಾಮಾಲೆ ಸೊಳ್ಳೆ(ಏಡೀಸ್ ಎಜಿಪ್ಟಿ ಹಾಗೂ ಇನ್ನಿತರ ಪ್ರಭೇಧಗಳು) ಹೆಣ್ಣು ಸೊಳ್ಳೆಯು ಕಚ್ಚುವುದರಿಂದ ಹರಡುತ್ತದೆ. ಇದು ದಕ್ಷಿಣ ಅಮೇರಿಕಾಹಾಗೂ ಆಫ್ರಿಕಾದ ಉಷ್ಣವಲಯ ಹಾಗೂ ಉಪ ಉಷ್ಣವಲಯ ಪ್ರದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು. ಆದರೆ ಏಷ್ಯಾದಲ್ಲಿ ಕಂಡುಬಂದಿರಲಿಲ್ಲ.[೨] ಈ ವೈರಸ್ ಹರಡುವಿಕೆಯು ಕೇವಲ ವಾನರ ಪ್ರಭೇದ ಹಾಗೂ ಸೊಳ್ಳೆಗಳ ಹಲವಾರು ಪ್ರಭೇದಗಳಿಂದ ಮಾತ್ರ ಹರಡುತ್ತದೆ. ಈ ಖಾಯಿಲೆಯ ಮೂಲವು ಹೆಚ್ಚಾಗಿ ಆಫ್ರಿಕಾ ಆಗಿರಬಹುದೆಂದು ನಂಬಲಾಗಿದೆ. ಇಲ್ಲಿಂದ ಇದು ೧೬ ನೇ ಶತಮಾನದಲ್ಲಿ ನಡೆಯುತ್ತಿದ್ದ ಗುಲಾಮರ ವ್ಯಾಪಾರದ ಸಮಯದಲ್ಲಿ ದಕ್ಷಿಣ ಅಮೇರಿಕಾಕ್ಕೆ ಪರಿಚಯಗೊಂಡಿತು ಎನ್ನಲಾಗಿದೆ. ೧೭ ನೇ ಶತಮಾನದ ನಂತರದಲ್ಲಿ ಈ ಕಾಯಿಲೆಯ ಅನೇಕ ಸಾಂಕ್ರಾಮಿಕ ಹರಡುವಿಕೆಯ ಪ್ರಕರಣಗಳು ಅಮೇರಿಕಾ, ಆಫ್ರಿಕಾ ಹಾಗೂ ಯುರೋಪ್‌ನಲ್ಲಿ ದಾಖಲಾದವು. ೧೯ ನೇ ಶತಮಾನದಲ್ಲಿ ಕಾಮಾಲೆಯು ಅತಿ ಅಪಾಯಕಾರಿ ಸಾಂಕ್ರಾಮಿಕ ಖಾಯಿಲೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿತ್ತು.[೩]
ಕಾಮಾಲೆಯು ಹೆಚ್ಚಿನ ಸಂದರ್ಭಗಳಲ್ಲಿಜ್ವರ, ವಾಕರಿಕೆ ಮತ್ತು ನೋವುಳ್ಳ ರೋಗಲಕ್ಷಣವನ್ನು ಹೊಂದಿರುತ್ತದೆ ಹಾಗೂ ಸಾಮಾನ್ಯವಾಗಿ ಸ್ವಲ್ಪ ದಿನಗಳ ನಂತರ ಕಡಿಮೆಯಾಗುತ್ತದೆ. ಕೆಲವು ರೋಗಿಗಳಲ್ಲಿ ನಂಜಿನ ಹಂತಗಳೂ ಕಂಡುಬರುತ್ತಿದ್ದು, ಇದರಿಂದಾಗಿ ಜಾಂಡೀಸ್ಗೆ ತುತ್ತಾಗಿ ಪಿತ್ತಜನಕಾಂಗವು ಹಾನಿಗೊಂಡು ರೋಗಿಯಯು ಸಾವನ್ನಪ್ಪಬಹುದಾಗಿದೆ. ರಕ್ತಸ್ರಾವವು ಹೆಚ್ಚುವ ಕಾರಣದಿಂದಾಗಿ (ರಕ್ತಸ್ರಾವ ಡಯಾಥೆಸಿಸ್) ಕಾಮಾಲೆಯನ್ನು ಹೆಮೋರೇಜಿಕ್ ಜ್ವರಗಳ ಗುಂಪಿಗೆ ಸೇರಿಸಲಾಗಿದೆ. WHOದ ಅಂದಾಜಿನಂತೆ ಪ್ರತಿ ವರ್ಷ ಚುಚ್ಚುಮದ್ದು ಹಾಕದ ಜನಸಂಖ್ಯೆಯಲ್ಲಿ[೪] ೩೦,೦೦೦ ಜನರು ಕಾಮಾಲೆಯಿಂದಾಗಿ ಸಾವನ್ನಪ್ಪುತ್ತಿದ್ದು, ೨೦೦,೦೦೦ ಜನರು ರೋಗಪೀಡಿತರಾಗುತ್ತಿದ್ದಾರೆ. ಇದರಲ್ಲಿ ಶೇ ೯೦ ರಷ್ಟು ಸೋಂಕು ಆಫ್ರಿಕಾವೊಂದರಲ್ಲೇ ಕಂಡುಬರುತ್ತಿದೆ.[೫]
೨೦ನೇ ಶತಮಾನದಲ್ಲಿ ಕಾಮಾಲೆಗೆ ಸುರಕ್ಷಿತ ಹಾಗೂ ಪರಿಣಾಮಕಾರಿ ಚುಚ್ಚುಮದ್ದು ಕಂಡುಹಿಡಿಯಲಾಯಿತು. ಕೆಲವು ರಾಷ್ಟ್ರಗಳು ಪ್ರವಾಸಿಗರಿಗೆ ಕಾಮಾಲೆ ಚುಚ್ಚುಮದ್ದನ್ನು ಅಗತ್ಯವಾಗಿಸಿವೆ.[೬] ಕಾಮಾಲೆಗೆ ನಿರ್ದಿಷ್ಟ ಔಷಧಿಯಿಲ್ಲವಾದರೂ, ರೋಗ ಹರಡುವ ಸೊಳ್ಳೆಗಳ ಪ್ರಮಾಣವನ್ನು ಇಳಿಸುವುದೂ ಸೇರಿದಂತೆ ಚುಚ್ಚುಮದ್ದು ಕಾರ್ಯಕ್ರಮಗಳು ಅತ್ಯಂತ ಮಹತ್ವದ್ದಾಗಿವೆ. ೧೯೮೦ರಿಂದ ಈಚೆಗೆ ಈ ಕಾಮಾಲೆಯ ಹಲವಾರು ಪ್ರಕರಣಗಳು ಕಂಡುಬರುತ್ತಿದ್ದು ಇದನ್ನು ಮರುಹುಟ್ಟು ಪಡೆದ ಕಾಯಿಲೆಯೆಂದು ಪರಿಗಣಿಸಲಾಗಿದೆ.[೭]
ರೋಗ ಸೂಚನೆ ಹಾಗೂ ಲಕ್ಷಣಗಳು
ಐದಾರು ದಿನಗಳು ದೇಹದೊಳಗೆ ಚಟುವಟಿಕೆಯಾಗಿದ್ದು ಒಮ್ಮೆಲೆ ಕಾಮಾಲೆಯು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಇದು ಜ್ವರ, ತಲೆನೋವು, ಬೆನ್ನು ನೋವು, ಚಳಿ, ಹಸಿವಿಲ್ಲದಿರುವಿಕೆ, ವಾಕರಿಕೆ ಮತ್ತು ವಾಂತಿಯನ್ನು ಉಂಟುಮಾಡುತ್ತದೆ.[೮] ಈ ಸನ್ನಿವೇಶಗಳಲ್ಲಿ ಸೋಂಕು ಕೇವಲ ಮೂರು ಅಥವಾ ನಾಲ್ಕು ದಿನಗಳವರೆಗೆ ಇರುತ್ತದೆ. ೧೫% ರೋಗಿಗಳು ಪುನರಾವರ್ತಿತ ಜ್ವರದೊಂದಿಗೆ ರೋಗದ ನಂಜಿನ ಎರಡನೇ ಘಟ್ಟವನ್ನು ತಲುಪುತ್ತಾರೆ. ಇದರಿಂದಾಗಿ ಪಿತ್ತಜನಕಾಂಗ ಹಾನಿಗೊಂಡು ಕಿಬ್ಬೊಟ್ಟೆಯ ನೋವಿನೊಂದಿಗ ಕಾಮಾಲೆಗೆ ಕಾರಣವಾಗುತ್ತದೆ. ಬಾಯಿ, ಕಣ್ಣು ಹಾಗೂ ಜಠರ ಕರುಳು ವ್ಯೂಹದಲ್ಲಿನ ರಕ್ತಸ್ರಾವವು ರಕ್ತವಾಂತಿಗೆ ಕಾರಣವಾಗುತ್ತದೆ.(ಇದಕ್ಕೆ ವೊಮಿಟೋ ನೆಗ್ರೋ ಎಂದು ಹೆಸರಿಸಲಾಗಿದೆ)[೯]
ಈ ನಂಜಿನ ಘಟ್ಟವು ಶೇಕಡಾ ೨೦ ಸಂದರ್ಭಗಳಲ್ಲಿ ಮಾರಕವಾಗಿದೆ.
ಈ ಸೋಂಕಿನಿಂದ ಬದುಕುಳಿದವರು ಜೀವನಪರ್ಯಂತ ಇದರಿಂದ ರಕ್ಷಿತರಾಗಿರಬೇಕು[೧೦] ಮತ್ತು ಇದರಿಂದ ಯಾವುದೇ ಇನ್ನುಳಿದ ಅಂಗಗಳು ಹಾನಿಗೊಳಗಾಗಿರುವುದಿಲ್ಲ.[೧೧]
ಕಾರಣ
Yellow fever virus | |
---|---|
Virus classification | |
Group: | Group IV ((+)ssRNA)
|
ಕುಟುಂಬ: | |
ಕುಲ: | |
ಪ್ರಜಾತಿ: | Yellow fever virus
|
ಕಾಮಾಲೆ ರೋಗಾಣುಗಳು ಕಾಮಾಲೆಗೆ ಕಾರಣ, ಅದು ೪೦ರಿಂದ ೫೦ nm ರಷ್ಟು ಅಗಲದ RNA ರೋಗಾಣುಗಳಿಂದ ಸುತ್ತುಗೊಂಡಿರುತ್ತದೆ ಹಾಗೂ ಅದು ಫ್ಲಾವಿವೈರಡೆ ತಳಿಗೆ ಸೇರಿದೆ. ಗುಣಾತ್ಮಕ ಪ್ರಜ್ಞೆಯ ಒಂಟಿ-ಎಳೆಯ RNA ಸರಾಸರಿ ೧೧,೦೦೦ ನ್ಯುಕ್ಲಿಯೋಟೈಡ್‌ಗಳಷ್ಟು ಉದ್ದವಿರುತ್ತದೆ ಹಾಗೂ ಒಂದು ಒಂಟಿ ತೆರೆದ ಓದುವ ಫ್ರೇಮ್ ಒಂದು ಪೊಲಿಪ್ರೋಟೀನ್‌ನನ್ನು ಎನ್‌ಕೋಡ್ ಮಾಡಿರುವುದು ಅದರಲ್ಲಿ ಒಳಗೊಂಡಿದೆ. ಆತಿಥೇಯ ಪ್ರೋಟೀಸಸ್ ಈ ಪೋಲಿಪ್ರೋಟೀನ್ ಅನ್ನು ತುಂಡುಗೊಳಿಸಿ ಮೂರು ವಿನ್ಯಾಸವುಳ್ಳ ಪ್ರೋಟೀನ್ (C, prM, E) ಹಾಗೂ ಏಳು ಅವಿನ್ಯಾಸದ ಪ್ರೋಟೀನ್ (NS೧, NS೨A, NS೨B, NS೩, NS೪A, NS೪B, NS೫) ಗಳಾಗಿಸುತ್ತದೆ;[೧೨] ಜಿನೋಮ್‌ಗಳಲ್ಲಿನ ಪ್ರೋಟಿನ್ ಕೋಡ್‌ಗಳ ಜೀನ್‌ಗಳಿಗೆ ನಮೂದನೆಗಳು ಸರಿಹೊಂದುತ್ತವೆ.[೧೨] ಇನ್ನು ಇತರ ಸೋಂಕಿನ ರೋಗಾಣುಗಳೆಂದರೆ ಮೋನೊಸೈಟ್ಸ್, ಮ್ಯಾಕ್ರೋಫೇಜಸ್ ಹಾಗೂ ಡೆಂಡ್ರಿಟಿಕ್ ಕೋಶಗಳು. ಅವು ಕೋಶದ ಮೇಲ್ಪದರಕ್ಕೆ ನಿರ್ಧಿಷ್ಟವಾದ ರಿಸೆಪ್ಟಾರ್‌ಗಳ ಮೂಲಕ ಅಂಟಿಸಿಕೊಂಡಿರುತ್ತವೆ ಹಾಗೂ ಎಂಡೋಸೊಮಲ್ ವೆಸಿಕಲ್‌ಯಿಂದ ತೆಗೆದುಕೊಳ್ಳಲಾಗುತ್ತದೆ. ಎಂಡೋಸೊಮ್‌ನ ಒಳಗೆ, ಇಳಿದ pH ಎಂಡೋಸೊಮಲ್ ಪದರವನ್ನು ರೋಗಾಣುವಿನ ಹೊರಪದರದ ಜೊತೆಗಿನ ಒಂದಾಗುವಿಕೆಯನ್ನು ಆರಂಭಗೊಳಿಸುತ್ತದೆ. ಹೀಗಾಗಿ, ಕ್ಯಾಪ್ಸಿಡ್ ಸೈಟೊಸೊಲ್ ಅನ್ನು ತಲುಪಿ, ಕೊಳೆಸಿ ಜಿನೋಮ್ ಅನ್ನು ಬಿಡುಗಡೆ ಮಾಡುತ್ತದೆ. ರಿಸೆಪ್ಟರ್‌ನ ನಿರ್ಬಂಧನೆ ಅಲ್ಲದೆ ಪದರದ ಒಂದಾಗುವಿಕೆಯು ಪ್ರೋಟಿನ್ E ಮೂಲಕ ವೇಗಗೊಳ್ಳುತ್ತದೆ, ಇದು ಅದರ ವಿನ್ಯಾಸವನ್ನು ಕಡಿಮೆ pHಗೆ ಬದಲಾಯಿಸುತ್ತದೆ ಮತ್ತು ಇದರಿಂದ ೯೦ ಸ್ವಡಿಮರ್‌ಗಳ ಹಾಗೂ ೬೦ ಸ್ವಟ್ರಿಮರ್‌ಗಳ ಮರುವಿನ್ಯಾಸ ಆಗುತ್ತದೆ.[೧೨]
ಆತಿಥೇಯ ಕೋಶಗಳಿಗೆ ಪ್ರವೇಶಿಸಿದಾಗ, ರೋಗಾಣು ಜಿನೋಮ್ ಒರಟಾದ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ (ER) ಗಳಲ್ಲಿ ಹಾಗೂ ವೆಸಿಕಲ್ ಪೊಟ್ಟಣಗಳು ಎಂದು ಕರೆಯಲಾದವುಗಳಲ್ಲಿ ಮರುರೂಪಗೊಳ್ಳುತ್ತದೆ. ಮೊದಲಿಗೆ, ER ಒಳಗೆ ಒಂದು ಪ್ರೌಢವಲ್ಲದ ರೋಗಾಣುವಿನ ತುಣುಕಿನ ರೂಪ ನಿರ್ಮಾಣಗೊಳ್ಳುತ್ತದೆ, ಇದರ M-ಪ್ರೋಟಿನ್ ಪ್ರೌಢ ರೂಪಕ್ಕೆ ಇನ್ನು ವಿಭಾಗಗೊಂಡಿಲ್ಲದ ಕಾರಣ ಅದು prMಗೆ (ಪ್ರಿಕರ್ಸರ್ M ) ದಾನ ಮಾಡಲಾಗುತ್ತದೆ ಹಾಗೂ ಪ್ರೋಟಿನ್ E ಜೊತೆ ಒಂದು ಸಂಯುಕ್ತ ಆಗುತ್ತದೆ. ಆತಿಥೇಯ ಪ್ರೋಟಿನ್ ಫ್ಯುರಿನ್ ಅಪ್ರೌಢ ತುಣುಕುಗಳನ್ನು ಗೊಲ್ಜೈ ಅಪಾರೆಟಸ್‌ನಲ್ಲಿ ಪ್ರಕ್ರಿಯಗೊಳಿಸುತ್ತದೆ, ಇದು prM ಅನ್ನು M ಗೆ ವಿಭಾಗಿಸುತ್ತದೆ.ಇದು E ಅನ್ನು ಸಂಯುಕ್ತದಿಂದ ಬಿಡುಗಡಿಸುತ್ತದೆ ಹಾಗೂ ಅದು ಪ್ರೌಢ ಸೋಂಕಿನ ರೋಗಾಣುದ ಸ್ಥಾನವನ್ನು ತೆಗೆದುಕೊಳ್ಳ ಬಲ್ಲದು.[೧೨]
ಪಸರುವಿಕೆ
ಕಾಮಾಲೆಯ ರೋಗಾಣು ಪ್ರಮುಖವಾಗಿ ಕಾಮಾಲೆಯ ಸೊಳ್ಳೆಯಾದ ಏಡಿಸ್ ಎಜಿಪ್ಟೈ ಯಿನ ಕಡಿತದಿಂದ ಹರಡುತ್ತದೆ, ಆದರೆ "ಟೈಗರ್ ಸೊಳ್ಳೆ" (ಏಡಿಸ್ ಆಬೋಪಿಕ್ಟಸ್ ) ಅಂಥಹ ಇತರ ಸೊಳ್ಳೆಗಳು ಕೂಡ ಈ ರೋಗಾಣುವಿಗೆ ಸದಿಶವಾಗಿ ಕಾರ್ಯವಹಿಸುತ್ತವೆ. ಇತರ ಆರ್ಬೋವೈರಸ್ ಸೊಳ್ಳೆಗಳಿಂದ ಹರಡಿದ ಹಾಗೆ ಕಾಮಾಲೆಯ ರೋಗಾಣುಗಳನ್ನು ಹೆಣ್ಣು ಸೊಳ್ಳೆಯು ಸೋಂಕಿದ ವ್ಯಕ್ತಿಯ ರಕ್ತ ಹೀರುವುದರಿಂದ ತೆಗೆದುಕೊಳ್ಳುತ್ತದೆ. ರೋಗಾಣುಗಳು ಸೊಳ್ಳೆಯ ಹೊಟ್ಟೆ ಸೇರುತ್ತವೆ ಮತ್ತು ಅವುಗಳ ದಟ್ಟತೆ ಸಾಕಷ್ಟು ಹೆಚ್ಚಾಗಿದ್ದರೆ ಈ ವೈರಿಯೊನ್‌ಗಳು ಎಪಿಥೆಲಿಯಲ್ ಕೋಶಗಳನ್ನು ಸೋಂಕಿಸಿ ಅಲ್ಲಿ ಮರುರೂಪಗೊಳ್ಳಬಹುದು. ಅಲ್ಲಿಂದ ಅವು ಹಿಮೊಸಿಯೋಲ್‌ಗೆ (ಸೊಳ್ಳೆಗಳ ರಕ್ತ ಪದ್ಧತಿ) ತಲುಪಿ ಮುಂದೆ ಲಾಲಾಗ್ರಂಥಿಗೆ ಸೇರುತ್ತವೆ. ಮುಂದಿನ ಸಲ ಸೊಳ್ಳೆ ರಕ್ತವನ್ನು ಹೀರುವಾಗ, ಅದು ತನ್ನ ಜೊಲ್ಲನ್ನು ಗಾಯದಲ್ಲಿ ಸೇರಿಸುತ್ತದೆ ಮತ್ತು ಹೀಗೆ ರೋಗಾಣು ಕಡಿತಕ್ಕೆ ಒಳಗಾದ ವ್ಯಕ್ತಿಯ ರಕ್ತವನ್ನು ತಲುಪುತ್ತದೆ. ಕಾಮಾಲೆಯ ರೋಗಾಣುವಿನ ಶೃಂಗೀಯ ಸೋಂಕಿನ ಚಿಹ್ನೆಗಳು A. ಎಜಿಪ್ಟೈ ನೊಳಗೆ ಕೂಡ ಕಂಡು ಬಂದಿವೆ, ಅಂದರೆ ಹೆಣ್ಣು ಸೊಳ್ಳೆಯಿಂದ ಅವಳ ಮೊಟ್ಟೆಗಳಿಗೆ ನಂತರ ಲಾರ್ವೆಗಳಿಗೆ ಪಸರುವಿಕೆ. ರೋಗ ಪ್ರಸಾರಕಗಳಿಗೆ ಈ ಸೋಂಕು ಉಂಟಾಗುವುದರಿಂದ ಇದು ಅಲ್ಲಿಂದ ಮುಂದೆ ಅವುಗಳ ಮೊಟ್ಟೆ ಹಾಗೂ ಲಾರ್ವಾಗಳಿಗೆ ಪ್ರಸಾರಿಸಲ್ಪಟ್ಟು ಇಲ್ಲಿ ಪ್ರಸಾರಕ ಸೊಳ್ಳೆಯು ಮನುಷ್ಯರಿಗೆ ರೋಗ ಹರಡದೆ ತನ್ನ ಇತರೆ ಪೀಳಿಗೆಗೆ ಹರಡುತ್ತದೆ.[೧೩]
ಸೋಂಕುಶಾಸ್ತ್ರದ ಅನುಸಾರ ಮೂರು ವಿವಿಧ ಸೋಂಕಿನ ಚಕ್ರಗಳಿವೆ,[೭] ಇದರಲ್ಲಿ ರೋಗಾಣುಗಳು ಸೊಳ್ಳೆಗಳಿಂದ ಮಾನವರಿಗೆ ಅಥವಾ ಇತರ ವಾನರಗಳ ಗಣಗಳಿಗೆ ಹರಡುತ್ತದೆ. ನಗರ ಪ್ರದೇಶದಲ್ಲಿ ಈ ಕಾಯಿಲೆಯ ಚಕ್ರದಲ್ಲಿ ಬರಿ ಕಾಮಾಲೆಯ ಸೊಳ್ಳೆಯಾದ ಎಡಿಸ್ ಎಜಿಪ್ಟೈ ಸೇರಿರುತ್ತದೆ. ಇದು ನಗರದ ಕೇಂದ್ರಗಳಲ್ಲಿ ಅಳವಡಿತವಾಗಿದ್ದು ಹಾಗೆಯೇ ಡೆಂಗು ಹಾಗೂ ಚಿಕನ್‌ಗುನ್ಯ ಅಂತಹ ಇತರ ರೋಗಗಳನ್ನು ಕೂಡ ಹರಡಿಸುತ್ತದೆ. ಆಫ್ರಿಕದಲ್ಲಿ ಕಾಮಾಲೆಯ ಹೆಚ್ಚು ಪಸರುವಿಕೆಗೆ ನಗರದ ಆವೃತ್ತಿಯೇ ಕಾರಣ. ೧೯೯೯ರ ಬೊಲಿವಿಯದಲ್ಲಿನ ಪ್ರಮುಖ ಆಸ್ಫೋಟನೆವನ್ನು ಹೊರೆತುಪಡಿಸಿ, ಈ ನಗರದ ಆವೃತ್ತಿ ದಕ್ಷಿಣ ಅಮೇರಿಕಾದಲ್ಲಿ ಇನ್ನಿಲ್ಲ ಹಾಗೂ ಬರಿ ಆಫ್ರಿಕಾದಲ್ಲಿ ಪ್ರಸ್ತುತವಿದೆ.
ಇರುವ ನಗರದ ಆವೃತ್ತಿ ಅಲ್ಲದೆ, ಆಫ್ರಿಕಾ ಹಾಗೂ ದಕ್ಷಿಣ ಅಮೇರಿಕದಲ್ಲಿ ಸಿಲ್ವ್ಯಾಟಿಕ್ ಆವೃತ್ತಿ (ಕಾಡಿನ ಆವೃತ್ತಿ ಅಥವಾ ವನ್ಯ ಆವೃತ್ತಿ) ಎಂದಿದೆ. ಇದರಲ್ಲಿ ಎಡಿಸ್ ಅಫ್ರಿಕನುಸ್ (ಆಫ್ರಿಕದಲ್ಲಿ) ಅಥವಾ ಹೆಮಗೊಗಸ್ ಹಾಗೂ ಸಬಥಿಸ್ ತಳಿಯ ಸೊಳ್ಳೆಗಳು (ದಕ್ಷಿಣ ಅಮೇರಿಕದಲ್ಲಿ) ಸದಿಶವಾಗಿ ಕಾರ್ಯ ಎಸಗುತ್ತಾರೆ. ಕಾಡಿನಲ್ಲಿ ಮುಖ್ಯವಾಗಿ ಮಾನವರಲ್ಲದ ವಾನರರಿಗೆ ಸೋಂಕು ತಗಲುತ್ತದೆ; ಆಫ್ರಿಕಾದ ವಾನರಗಳಲ್ಲಿ ಈ ರೋಗವು ಬಹಳಷ್ಟು ರೋಗಲಕ್ಷಣಗಳು ಇಲ್ಲದೆ ಇರುತ್ತದೆ. ದಕ್ಷಿಣ ಅಮೇರಿಕದಲ್ಲಿ, ಪ್ರಸ್ತುತ ಸಿಲ್ವ್ಯೆಟಿಕ್ ಆವೃತ್ತಿ ಮಾತ್ರ ಮಾನವರಲ್ಲಿ ಈ ಸೋಂಕು ಹರಡಲು ದಾರಿ. ಇದು ಆ ಖಂಡದಲ್ಲಿ ಕಡಿಮೆ ಪ್ರಸಂಗಗಳನ್ನು ವಿವರಿಸುತ್ತದೆ. ಕಾಡಿನಲ್ಲಿ ರೋಗಾಣುವಿನಿಂದ ಸೋಂಕಲ್ಪಟ್ಟ ಜನರು ನಗರದ ಕೇಂದ್ರಗಳಿಗೆ ಅದನ್ನು ಪಸರಿಸಿ ಅಲ್ಲಿ Ae. ಎಜಿಪ್ಟೈ ಸದಿಶವಾಗಿ ನಟಿಸುತ್ತದೆ. ಸಿಲ್ವ್ಯೆಟಿಕ್ ಆವೃತ್ತಿಯ ಕಾರಣ ಕಾಮಾಲೆಯನ್ನು ಪೂರ್ತಿಯಾಗಿ ನಿರ್ಣಾಮಗೊಳಿಸಲು ಆಗುವುದಿಲ್ಲ.[೭]
ಆಫ್ರಿಕಾದಲ್ಲಿ ಒಂದು ಮೂರನೇಯ ಸೋಂಕಿನ ಆವೃತ್ತಿ ಇದೆ, ಇದನ್ನು ಸವನ್ನಾ ಆವೃತ್ತಿ ಅಥವಾ ಮಧ್ಯಾಂತರ ಆವೃತ್ತಿ ಎಂದು ಕೂಡ ಕರೆಯಲಾಗುತ್ತದೆ. ಇದು ಕಾಡಿನ ಹಾಗೂ ನಗರದ ಆವೃತ್ತಿಗಳ ನಡುವೆ ಸಂಭವಿಸುತ್ತದೆ. ಎಡಿಸ್ ತಳಿಯ ಹಲವು ಸೊಳ್ಳೆಗಳು ಇದರಲ್ಲಿ ಒಳಗೊಂಡಿವೆ. ಆಫ್ರಿಕಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡ ಬಹಳ ಸಾಮಾನ್ಯ ರೂಪದ ಕಾಮಾಲೆ ಇದು.[೪]
ರೋಗ ಬೆಳವಣಿಗೆ
ಸೊಳ್ಳೆಯ ಮೂಲಕ ರೋಗಾಣು ಹರಡಿದ ನಂತರ ಅವುಗಳು ಲಿಂಫ್ ಗಂಟುಗಳಲ್ಲಿ ಮರುರೂಪಗೊಳ್ಳೂತ್ತವೆ ಹಾಗೂ ವಿಶೇಷವಾಗಿ ಡೆಂಡ್ರಿಕ್ ಕೋಶಗಳಿಗೆ ಸೋಂಕಿಸುತ್ತವೆ. ಅಲ್ಲಿಂದ ಅವುಗಳು ಪಿತ್ತಕೋಶವನ್ನು ತಲುಪಿ ಹೆಪ್ಟೊಸೈಟ್‌ಗಳಿಗೆ ಸೋಂಕಿಸುತ್ತವೆ (ಕಪ್ಫರ್ ಕೋಶಗಳ ಮೂಲಕ ನೆರವಲ್ಲದ ರೀತಿಯಲ್ಲಿ ಎಂದು ಅಂದಾಜು ಮಾಡಲಾಗಿದೆ). ಇದು ಈ ಕೋಶಗಳ ಎಸಿನೊಫಿಲಿಕ್ ಕುಂದುವಿಕೆಗೆ ದಾರಿಯಾಗಿ ಸೈಟೊಕಿನ್‌ಗಳನ್ನು ಬಿಡುಗಡಿಸುತ್ತವೆ. ನೆಕ್ರೊಟಿಕ್ ಗುಂಪುಗಳು (ಕೌನ್‌ಸಿಲ್‌ಮನ್ ಅಂಗಗಳು) ಹೆಪ್ಟೊಸೈಟ್ಸ್‌ನ ಸೈಟೊಪ್ಲಾಸ್ಮ್ನಲ್ಲಿ ಕಾಣಿಸಿಕೊಳ್ಳುತ್ತವೆ.[೬][೧೪]
ಈ ರೋಗವು ಮಾರಕವಾದಾಗ ಒಂದು ಕಾರ್ಡಿಯೋವಾಸ್ಕ್ಯೂಲರ್ ನರಾಘಾತ ಹಾಗೂ ಹಲವು ಅಂಗಗಳ ವೈಫಲ್ಯ ಜೊತೆ ಸೈಟೊಕಿನ್‌ನ ಏರಿದ ಮಟ್ಟ (ಸೈಟೊಕಿನ್ ಬಿರುಗಾಳಿ) ಅನುಸರಿಸುತ್ತದೆ.[೧೫]
ರೋಗನಿರ್ಣಯ
ಕಾಮಾಲೆಯ ರೋಗ ನಿರ್ಣಯವನ್ನು ಚಿಕಿತ್ಸಾಲಯದಲ್ಲೆ ಮಾಡಬಹುದು. ಇದು ಸಾಧಾರಣವಾಗಿ ರೋಗಿಯಲ್ಲಿ ಸುಪ್ತವಾಗಿರುವ ಸಮಯದಲ್ಲಿನ ಇರುವಿಕೆಯ ಮೇಲೆ ಆಧಾರಿತವಾಗಿರುತ್ತದೆ. ಸೂಕ್ಷ್ಮರೋಗಾಣು ಶಾಸ್ತ್ರಕ್ಕೆ ಸಂಬಂಧಿಸಿದಂತೆ ಈ ರೋಗದ ತೀವ್ರವಲ್ಲದ ವಿಧಾನಗಳನ್ನು ನಿರ್ಧರಿಸಬಹುದು. ಕಾಮಾಲೆಯ ತೀವ್ರವಲ್ಲದ ವಿಧಾನಗಳು ಕೂಡ ಪ್ರಮುಖವಾಗಿ ಪ್ರದೇಶದಲ್ಲಿನ ಹರಡುವಿಕೆಗೆ ಸಹಾಯವಾಗಬಹುದು, ಆದ್ದರಿಂದ ಪ್ರತಿ ಅನುಮಾನ ಪೀಡಿತ ಕಾಮಾಲೆಯನ್ನು ಗಂಭೀರವಾಗಿ ಉಪಚರಿಸಬೇಕು (ಪರೀಣಾಮ ಬೀರಿದ ಪ್ರದೇಶವನ್ನು ಬಿಟ್ಟು ಆರರಿಂದ ಹತ್ತು ದಿನಗಳ ನಂತರವೂ ಕೂಡ ಜ್ವರ, ನೋವು, ಪಿತ್ತೋದ್ರೇಕ ಹಾಗೂ ವಾಂತಿಗಳಂಥಹ ರೋಗಲಕ್ಷಣಗಳು ಕಂಡಲ್ಲಿ).
ಕಾಮಾಲೆ ಎಂದು ಅನುಮಾನಿಸಲಾದರೆ, ಆ ರೋಗಾಣುವನ್ನು ಆರರಿಂದ ಹತ್ತು ದಿನಗಳ ಅನಾರೋಗ್ಯದಿಂದ ನಿರ್ಧರಿಸಬಹುದು. ರಿವರ್ಸ್ ಟ್ರಾನ್ಸಕ್ರಿಪ್ಷನ್ ಪೊಲಿಮರೀಸ್ ಚೇನ್ ರಿಯಾಕ್ಷನ್ ಅಂತಹದರಿಂದ ಕಾಮಾಲೆಯ ನೇರ ನಿರ್ಧಿಷ್ಟತೆಯನ್ನು ಪಡೆಯಬಹುದು, ಇಲ್ಲಿ ರೋಗಾಣುವಿನ ಜಿನೋಮ್ ಅನ್ನು ಹೆಚ್ಚಿಸಲಾಗುತ್ತದೆ.[೫] ಇನ್ನೊಂದು ನೇರ ಹಾದಿ ಎಂದರೆ ರೋಗಾಣುವಿನ ಪ್ರತ್ಯೇಕೀಕರಣ ಹಾಗೂ ರಕ್ತದ ಪ್ಲಾಸ್ಮಾವನ್ನು ಬಳಸಿ ಕೋಶದ ಸಂಸ್ಕರಿಸುವಿಕೆಯ ಮೂಲಕ ಅದರ ಬೆಳವಣಿಗೆ; ಇದು ಒಂದರಿಂದ ನಾಲ್ಕು ವಾರಗಳ ಕಾಲ ಸಮಯ ತೆಗೆದುಕೊಳ್ಳಬಹುದು.
ರೋಗದ ತೀವ್ರವಾದ ಹಂತದಲ್ಲಿ ನಿರ್ಧಿಷ್ಟವಾದ IgM ಅನ್ನು ಕಾಮಾಲೆಯ ಅಥವಾ ನಿರ್ಧಿಷ್ಟ IgG - ಯ ಗಾಢತೆ (ಮುಂಚಿನ ಮಾದರಿಯನ್ನು ಹೋಲಿಸಿದರೆ) ಅನ್ನು ಬಳಸಿ ಸೀರಮ್ ಶಾಸ್ತ್ರದ ಅನುಸಾರ ಒಂದು ಎಂಜೈಮು ಪ್ರತಿರಕ್ಷ ಲೀನವಾದ ಲೋಹಪರೀಕ್ಷೆಗೆ ಸಂಯೋಜಿಸಿದಾಗ ಕಾಮಾಲೆಯನ್ನು ಧೃಢಪಡಿಸಬಹುದು. ರೋಗಲಕ್ಷಣದ ಜೊತೆಗೆ IgM ಅಥವಾ IgG-ಗಾಢತೆಯಲ್ಲಿ ನಾಲ್ಕು ಪಟ್ಟಿನ ಹೆಚ್ಚಳದ ಶೋಧನೆ ಕಾಮಾಲೆಯ ಲಕ್ಷಣಗಳನ್ನು ತೋರುವುದಲ್ಲಿ ಸಮರ್ಥ. ಈ ಪರೀಕ್ಷೆಗಳು ಇತರ ಫ್ಲಾವಿ ರೋಗಾಣುಗಳ ಜೊತೆ ಡೇಂಗು ರೋಗಾಣು ಅಂತಹ ಅನ್ಯ ಪ್ರತಿಕ್ರಿಯೆ ತೋರಿಸಬಹುದು, ಈ ನೇರವಲ್ಲದ ಪದ್ಧತಿಗಳು ಕಾಮಾಲೆಯ ಸೋಂಕನ್ನು ಎಂದೂ ಪ್ರಮಾಣಿಕರಿಸಲಾರವು. ಪಿತ್ತಜನಕಾಂಗದ ರೋಗಪತ್ತೆ ಮಾಡುವ ವಿಧಾನವು ಉರಿಯೂತ ಹಾಗೂ ಹೆಪ್ಟೊಸೈಟ್ಸ್‌ನ ಕುರುಹವನ್ನು ಪರಿಶೀಲಿಸುತ್ತದೆ ಮತ್ತು ರೋಗಾಣು ಪ್ರತಿಜನಕಗಳನ್ನು ಪತ್ತೆಹಚ್ಚುತ್ತದೆ. ಕಾಮಾಲೆ ರೋಗಿಗಳ ರಕ್ತ ಸುರಿಯುವ ಪ್ರವೃತ್ತಿಯ ಕಾರಣ ಮರಣದ ಕಾರಣವನ್ನು ಮರಣದ ನಂತರ ಶೋಧಿಸಲು ರೋಗಪತ್ತೆ ಹಚ್ಚುವ ವಿಧಾನ ಒಂದೆ ಯುಕ್ತ ಎಂದು ಹೇಳಲಾಗುವುದು.
ಭೇದಾತ್ಮಕ ರೋಗನಿರ್ಣಯದಲ್ಲಿ, ಕಾಮಾಲೆ ಸೋಂಕಿನ ಜ್ವರವನ್ನು ಮಲೇರಿಯ ಅಂತಹ ಇತರ ಅನಾರೋಗ್ಯದ ಜ್ವರದಿಂದ ವ್ಯತ್ಯಾಸಗೊಳಿಸುವುದು ಮುಖ್ಯ. ಎಬೋಲ ರೋಗಾಣು, ಲಾಸ್ಸಾ ರೋಗಾಣು, ಮಾರ್ಬಗ್ ರೋಗಾಣು ಅಥವಾ ಜುನಿನ್ ರೋಗಾಣು ಅಂತಹ ಇತರ ರಕ್ತ ಸುರಿಯುವ ರೋಗದ ಜ್ವರಗಳನ್ನು ಕಾರಣವಾಗಿ ವರ್ಜಿಸಬೇಕು.
ನಿಯಂತ್ರಣ
ಕಾಮಾಲೆಯ ವೈಯುಕ್ತಿಕ ನಿಯಂತ್ರಣದಲ್ಲಿ ಲಸಿಕೆಗಳ ಪಡೆಯುವಿಕೆ ಅಲ್ಲದೆ ಕಾಮಾಲೆಯ ಇರುವ ವ್ಯಾಧಿ ಪ್ರದೇಶದಲ್ಲಿ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳುವುದು ಮುಖ್ಯ. ಕಾಮಾಲೆಯ ನಿಯಂತ್ರಣಕ್ಕೆ ಸಂಸ್ಥೆಗಳು ಕೈಗೊಂಡಿರುವ ಕ್ರಮಗಳೆಂದರೆ ಲಸಿಕೆಗಳ ಕಾರ್ಯಕ್ರಮ ಹಾಗೂ ಸೊಳ್ಳೆಗಳನ್ನು ತಡೆಗಟ್ಟುವ ಕ್ರಮಗಳು.
ಲಸಿಕೆಗಳು
ರೋಗ ಹರಡಿರುವ ಪ್ರದೇಶಗಳಲ್ಲಿ ಪ್ರವಾಸ ಮಾಡ ಬೇಕಾದರೆ, ಲಸಿಕೆಯನ್ನು ಮುಖ್ಯವಾಗಿ ಶಿಫಾರಸು ಮಾಡಲಾಗುತ್ತೆ ಕಾರಣ ಸ್ಥಳೀಯವಲ್ಲದ ಜನರು ತೀವ್ರವಾದ ಪ್ರಸಂಗಗಳಲ್ಲಿ ಕಾಮಾಲೆಯ ಗುರಿಯಾಗುತ್ತಾರೆ. ೯೫% ಲಸಿಕೆ ಪಡೆದ ಜನರಲ್ಲಿ[೧೬] ಸುರಕ್ಷತೆಯ ಪರಿಣಾಮ ಲಸಿಕೆಯ ೧೦ ದಿನಗಳ ನಂತರ ಸ್ಥಾಪಿತವಾಗುತ್ತದೆ ಹಾಗೂ ಕನಿಷ್ಟವಾಗಿ ೧೦ ವರುಷಗಳವರೆಗೆ ಇದರ ಪ್ರಭಾವ ಇರುತ್ತದೆ (ಕೆಲವು ಸಲ ೩೦ ವರುಷಗಳ ನಂತರವೂ ಕೂಡ, ೮೧% ರೋಗಿಗಳು ರೋಗ ನಿರೋಧಕತೆಯನ್ನು ಉಳಿಸಿಕೊಂಡಿರುತ್ತಾರೆ). (ಸ್ಟೆಮ್ ೧೭D) ತಿಳಿಗೊಂಡಿಸಿದ ನೇರ ಲಸಿಕೆಯನ್ನು ೧೯೩೭ರಲ್ಲಿ ಮ್ಯಾಕ್ಸ್ ಥೈಲರ್[೧೬] ಅವರು ಘಾನಾದ ಒಬ್ಬ ರೋಗ ಪೀಡಿತನಿಂದ ವೃದ್ಧಿಪಡಿಸಿದರು ಹಾಗೂ ಇದು ಕೋಳಿಯ ಮೊಟ್ಟೆಗಳಲ್ಲಿ ಉತ್ಪನ್ನವಾಗುತ್ತದೆ. ವ್ಯಾಧಿ ಪ್ರದೇಶಗಳಲ್ಲಿನ ಜನರು ಶಿಶುಗಳ ಜನನದ ನಂತರ ೯ ಹಾಗೂ ೧೨ನೇಯ ತಿಂಗಳ ಮಧ್ಯದಲ್ಲಿ ಲಸಿಕೆಗಳನ್ನು WHO ಶಿಫಾರಸ್ಸು ಮಾಡುತ್ತದೆ.[೫]
ಸುಮಾರು ೨೦% ಪ್ರಸಂಗಗಳಲ್ಲಿ,[೧೭] ತೀವ್ರವಲ್ಲದ ನೆಗಡಿ ಮತ್ತು ಜ್ವರದಂತಹ ಲಕ್ಷಣಗಳು ಬೆಳೆದುಕೊಳ್ಳಬಹುದು. ಅಪರೂಪದ ಸಂದರ್ಭದಲ್ಲಿ (೨೦೦,೦೦೦ಯಿಂದ ೩೦೦,೦೦೦ಗಳಲ್ಲಿ ಒಂದರಗಿಂತ ಕಡಿಮೆ ಸಲ[೧೬]), ಲಸಿಕೆಯು YEL-AVD (yellow fever vaccine-associated viscerotropic disease ) ಗೆ ಕಾರಣವಾಗಬಹುದು ಮತ್ತು ಇದು ೬೦% ಎಲ್ಲ ಸಂದರ್ಭಗಳಲ್ಲಿ ಮಾರಕವಾಗಿರುತ್ತದೆ. ಇದು ಸಾಮಾನ್ಯವಾಗಿ ರೋಗ ನಿರೋಧಕ ಪದ್ಧತಿಯಲ್ಲಿ ಒಂದು ಆನುವಂಶಿಕ ದೋಷದ ಕಾರಣವಿರಬಹುದು. ಆದರೆ ಕೆಲವು ಲಸಿಕೆಗಳ ಕಾರ್ಯಾಚರಣೆಯಲ್ಲಿ, ೨೦ ಪಟ್ಟು ಹೆಚ್ಚು ಪುನರಾವರ್ತನೆಯ ಮಟ್ಟ ವರದಿಯಾಗಿದೆ. ವಯಸ್ಸು ಒಂದು ಮುಖ್ಯವಾದ ಅಪಾಯಕಾರಿ ಕಾರಣವಾಗಿರಬಹುದು; ಮಕ್ಕಳಲ್ಲಿ ಪ್ರತಿ ೧೦ ಮಿಲಿಯನ್ ಲಸಿಕೆಗಳಲ್ಲಿ ಒಂದರಗಿಂತ ಕಡಿಮೆ ಸಂಕೀರ್ಣಗೊಂಡ ಪ್ರಸಂಗವಿರುತ್ತದೆ. ಇನ್ನೊಂದು ಸಾಧ್ಯವಾದ ಪಾರ್ಶ್ವ ಪರಿಣಾಮ ಎಂದರೆ ನರಗಳ ವ್ಯೂಹದಲ್ಲಿ ಆಗಬಹುದಾದ ಸೋಂಕು, ಇದು ೨೦೦,೦೦೦ರಿಂದ ೩೦೦,೦೦೦ರಷ್ಟು ಜನರಲ್ಲಿ ಒಬ್ಬರಿಗಾಗಬಹುದು. ಈ ಸೋಂಕಿಂದ YEL-AND (ಕಾಮಾಲೆಯ ಲಸಿಕೆಗೆ ಸಂಬಂಧಿಸಿದ ನರಗಳ ಜೀವಕೋಶಕದ ರೋಗ ) ಉಂಟಾಗಬಹುದು, ಮುಂದೆ ಇದು ಮೆನಿಂಗೊಯೆನ್ಸೆಪ್‌ಲೈಟಿಸ್‌ಗೆ ದಾರಿಯಾಗಬಹುದು ಹಾಗೂ ೫%[೧೬] ನಷ್ಟು ಎಲ್ಲ ಸಂಧರ್ಭಗಳಲ್ಲಿ ಇದು ಮಾರಣವಾಗಿರುತ್ತದೆ.[೫][೧೫]
೨೦೦೯ರಲ್ಲಿ ಕಾಮಾಲೆಯ ವಿರುದ್ಧ ಅತಿ ಬೃಹತ್ತಾದ ಲಸಿಕೆಯ ಕಾರ್ಯಕ್ರಮ ಪಶ್ಚಿಮ ಆಫ್ರಿಕಾದಲ್ಲಿ ಆರಂಭಗೊಂಡಿತು, ವಿಶೇಷವಾಗಿ ಬೆನಿನ್, ಲಿಬೇರಿಯ ಹಾಗೂ ಸೈರಿಯ ಲಿಯೊನ್‌ಗಳಲ್ಲಿ.[೧೮][೧೯] ಇದು ೨೦೧೫ರಲ್ಲಿ ಪೂರ್ಣಗೊಂಡಾಗ, ೧೨ ಮಿಲಿಯನ್‌ಗಿಂತ ಹೆಚ್ಚು ಜನರು ಈ ಕಾಯಿಲೆಯ ವಿರುದ್ಧ ಲಸಿಕೆಯನ್ನು ಪಡೆದಿರುತ್ತಾರೆ.[೧೮] ವಲ್ಡ್ ಹೆಲ್ತ್ ಒರ್ಗನೈಸೇಷನ್ ಅವರ ಅನುಸಾರ, ಈ ಸಮೂಹ ಲಸಿಕೆಯ ಕಾರ್ಯಕ್ರಮ ಕಾಮಾಲೆಯನ್ನು ಸಂಪೂರ್ಣವಾಗಿ ತೊಲಗಿಸುವುದಿಲ್ಲ ಕಾರಣ ಈಗಾಗಲೆ ಹಲವು ದೇಶಗಳ ನಗರ ಪ್ರದೇಶಗಳಲ್ಲಿನ ಸೊಳ್ಳೆಗಳು ಹೆಚ್ಚು ಸಂಖ್ಯೆಗಳಲ್ಲಿ ಸೋಂಕಿತಗೊಂಡಿವೆ. ಆದರೆ ನಿಶ್ಚಿತವಾಗಿ ಇದು ಸೋಂಕಿತಗೊಂಡ ಜನರ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ.[೧೮] ಅದೇನೇ ಇದ್ದರೂ, WHO ತಮ್ಮ ಲಸಿಕೆಯ ಕಾರ್ಯಾಚರಣೆಯನ್ನು ಇನ್ನು ಐದು ಆಫ್ರಿಕನ್ ದೇಶಗಳಲ್ಲಿ ಮುಂದುವರಿಸಲು ಯೋಜಿಸಿದೆ - ಮಧ್ಯ ಆಫ್ರಿಕನ್ ಗಣರಾಜ್ಯ, ಘಾನಾ, ಗಿನಿಯ, ಐವರಿ ಸಮುದ್ರತೀರ ಹಾಗೂ ನೈಜಿರೀಯ - ಮತ್ತು ಸಂಸ್ಥೆಗೆ ಇನ್ನಷ್ಟು ಹಣಸಹಾಯ ದೊರಕಿಲ್ಲದಿದ್ದಲ್ಲಿ ಸುಮಾರು ೧೬೦ ಮಿಲಿಯನ್ ಖಂಡದಲ್ಲಿನ ಜನರು ಅಪಾಯದಲ್ಲಿದ್ದಾರೆ ಎಂದು ಹೇಳಿದೆ.[೨೦]
ಕಡ್ಡಾಯ ಚುಚ್ಚುಮದ್ದು
ಏಷ್ಯಾದ ಕೆಲವು ದೇಶಗಳು ಕಾಮಾಲೆ ಸಾಂಕ್ರಾಮಿಕ ರೋಗದ ಅಪಾಯದಲ್ಲಿದೆ (ಕಾಮಾಲೆಯನ್ನು ಹರಡುವ ಸಾಮಾರ್ಥ್ಯವಿರುವ ಸೊಳ್ಳೆಗಳು ಮತ್ತು ಸಂವೇದನಾಶೀಲ ಮಂಗಗಳಿವೆ), ಆದರೂ ಸಹ ಇದುವರೆಗೆ ಅಲ್ಲಿ ಈ ರೋಗ ಉಂಟಾಗಲಿಲ್ಲ. ಕೆಲವು ದೇಶಗಳು ವೈರಸ್‍ನ್ನು ತಡೆಗಟ್ಟಲು ಕಾಮಾಲೆಯಿರುವ ಪ್ರದೇಶದಿಂದ ಬರುವ ಜನರಿಗೆ ಮೊದಲೇ ಚುಚುಮದ್ದನ್ನು ತೆಗೆದುಕೊಳ್ಳುವಂತೆ ಆದೇಶ ನೀಡುತ್ತವೆ. ಇದು ಚುಚುಮದ್ದು ಹಾಕಿಸಿಕೊಂಡ ಹತ್ತು ದಿನಗಳ ನಂತರ ಮತ್ತು ಹತ್ತು ವರ್ಷಗಳವರೆಗೆ ಉಪಯುಕ್ತವಾಗಿದೆ ಎಂದು ಚುಚ್ಚುಮದ್ದಿನ ಪ್ರಮಾಣಪತ್ರದಲ್ಲಿ ಸಾಬೀತುಪಡಿಸಿದೆ. ಕಾಮಾಲೆ ರೋಗದ ಚುಚ್ಚುಮದ್ದಿನ ಅವಶ್ಯಕತೆಯಿರುವ ದೇಶಗಳ ಪಟ್ಟಿಯನ್ನು ಡಬ್ಲುಎಚ್‍ಒ ಪ್ರಕಟಗೊಳಿಸಿದೆ.[೨೧] ಕೆಲವು ಕಾರಣಗಳಿಂದ ಚುಚ್ಚುಮದ್ದು ಹಾಕುವುದು ಸಾಧ್ಯವಾಗದೆ ಹೋದರೆ, ವಿತರಣೆ ಸಾಧ್ಯವಿದೆ. ಇಂತಹ ಸಂದರ್ಭಗಳಲ್ಲಿ ಡಬ್ಲುಎಚ್‍ಒದಿಂದ ಮಾನ್ಯತೆ ಪಡೆದ ಚುಚ್ಚುಮದ್ದು ಕೇಂದ್ರದ ವಿನಾಯಿತಿ ಪತ್ರದ ಅವಶ್ಯಕತೆಯಿದೆ.
ಆದಾಗ್ಯೂ ಸಾಂಕ್ರಾಮಿಕವಾಗಿ ಕಾಮಾಲೆ ಉಂಟಾಗುವ ೪೪ ರಲ್ಲಿ ೩೨ ದೇಶಗಳು ಚುಚ್ಚುಮದ್ದು ಹಾಕಿಸುವ ಕಾರ್ಯಕ್ರಮಗಳನ್ನು ಹೊಂದಿವೆ, ಇಂತಹ ಬಹಳ ದೇಶಗಳಲ್ಲಿ ಜನಸಂಖ್ಯೆಯ ೫೦% ಕ್ಕಿಂತ ಕಡಿಮೆ ಜನ ಚುಚ್ಚುಮದ್ದು ಹಾಕಿಸಿಕೊಂಡವರಾಗಿದ್ದಾರೆ.[೫]
ವೆಕ್ಟರ್ ನಿಯಂತ್ರಣ
ಚುಚ್ಚುಮದ್ದಿನ ಹೊರತಾಗಿ, ಹಳದಿ ಕಾಮಾಲೆಗೆ ಕಾರಣವಾಗುವ ಎದೆಸ್ ಈಜಿಪ್ಟಿ ಎಂಬ ಸೊಳ್ಳೆಯನ್ನು ನಿಯಂತ್ರಿಸುವುದು ಮುಖ್ಯವಾಗಿದೆ. ಏಕೆಂದರೆ ಇದೇ ಸೊಳ್ಳೆ ಡೆಂಗ್ಯೂ ಮತ್ತು ಚಿಕನ್‍ಗುನ್ಯ ರೋಗಗಳನ್ನೂ ಸಹ ಹರಡಬಹುದು. ಈಡೀಸ್ ಈಜಿಪ್ಟಿ ಸೊಳ್ಳೆಗಳು ಮುಖ್ಯವಾಗಿ ನೀರಿನಲ್ಲಿ ಹುಟ್ಟಿಕೊಳ್ಳುತ್ತವೆ, ಉದಾಹರಣೆಗೆ ಕುಡಿಯುವ ನೀರಿನ ಸರಬರಾಜಿನ ಪ್ರದೇಶದಲ್ಲಿರುವ ನಿವಾಸಿಗಳ ನೀರಿನ ತೊಟ್ಟಿಯಲ್ಲಿ, ಅಥವಾ ಗೃಹಬಳಕೆಯ ನಿರುಪಯುಕ್ತಗಳಲ್ಲಿ; ಮುಖ್ಯವಾಗಿ ಟೈರುಗಳು, ಕ್ಯಾನುಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು. ಮುಖ್ಯವಾಗಿ ಅಭಿವೃದ್ಧಿಹೊಂದುತ್ತಿರುವ ದೇಶಗಳ ನಗರ ಪ್ರದೇಶಗಳ ಹತ್ತಿರ ಈ ಸ್ಥಿತಿ ಸಾಮಾನ್ಯವಾಗಿದೆ ಮತ್ತು ಎ.ಈಜಿಪ್ತಿ ಗಳಿಗೆ ಉತ್ತಮ ವಾಸಸ್ಥಾನವಾಗಿಸಿದೆ. ಎರಡು ಕಾರ್ಯತಂತ್ರಗಳು ಸೊಳ್ಳೆಗಳನ್ನು ನಾಶಪಡಿಸಲು ಕೆಲಸ ಮಾಡುತ್ತವೆ:
ಅಭಿವೃದ್ಧಿ ಹೊಂದುತ್ತಿರುವ ಲಾರ್ವಾಗಳನ್ನು ಕೊಲ್ಲುವುದು ಒಂದು ವಿಧಾನ. ನೀರು ನಿಲ್ಲುವುದನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು (ಲಾರ್ವಾಗಳ ವಾಸಸ್ಥಾನ), ಮತ್ತು ಲಾರ್ವಿಸೈಡ್ ಗಳು ಮತ್ತು ಕೋಪ್‍ಪೋಡ್ ಗಳನ್ನು ಲಾರ್ವಾ ತಿನ್ನುವ ಮೀನುಗಳಾಗಿ ಉಪಯೋಗಿಸುತ್ತಾರೆ, ಇದು ಲಾರ್ವಾಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೀಗೆ ಪರೋಕ್ಷವಾಗಿ ರೋಗ ಹರಡುವ ಸೊಳ್ಳೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಡೆಂಗ್ಯೂ ಜ್ವರದ ವಿರುದ್ಧ ಹೋರಾಡಲು ವಿಯೆಟ್ನಾಂಲ್ಲಿ ಹಲವಾರು ವರ್ಷಗಳಿಂದ ಜಲಚರ ಪ್ರಬೇದದ ಮೆಸೊಸೈಕ್ಲೊಪಸ್. ಅನ್ನು ಬೆಳೆಸಲಾಗುತ್ತದೆ. (ಏಷ್ಯಾದಲ್ಲಿ ಕಾಮಾಲೆ ಸಂಭವಿಸಿಲ್ಲ), ಇದರ ಪರಿಣಾಮವಾಗಿ ೨೦೦೧ರಿಂದ ಪ್ರಭಾವ ಹೊಂದಿದ ಪ್ರದೇಶಗಳಲ್ಲಿ ಡೆಂಗ್ಯೂ ಜ್ವರ ಉಂಟಾದ ಯಾವುದೇ ಘಟನೆ ದಾಖಲಾಗಿಲ್ಲ. ಬಹುಶಃ ಕಾಮಾಲೆಯ ವಿರುದ್ಧ ಸಹ ಅಂತಹದೇ ತಂತ್ರಗಳು ಪ್ರಭಾವಶಾಲಿಯಾಗಬಹುದು. ಪೈರಿಪ್ರೊಕ್ಸಿಫೆನ್ ನ್ನು ರಾಸಾಯನಿಕ ಲಾರ್ವಿಸೈಡ್ ಆಗಿ ಅಂಗೀಕರಿಸಲಾಗಿದೆ ಏಕೆಂದರೆ ಇದು ಮಾನವರಿಗೆ ಸುರಕ್ಷಿತವಾಗಿದೆ ಮತ್ತು ಕಡಿಮೆ ಪ್ರಮಾಣವು ಪ್ರಭಾವಶಾಲಿಯಾರುತ್ತದೆ.[೫]
ಲಾರ್ವಾಗಳ ಹೊರತಾಗಿ ಪ್ರಬುದ್ಧ ಕಾಮಾಲೆ ಸೊಳ್ಳೆಗಳನ್ನು ಸಹ ನಾಶಪಡಿಸಲಾಗುವುದು. ನೀರಿನ ತೊಟ್ಟಿಯ ಆವರಣ ಮತ್ತು ಮುಚ್ಚಳಗಳಿಗೆ ಕ್ರಿಮಿನಾಶಕಗಳನ್ನು ಸಿಂಪಡಿಸಲಾಗುವುದು. ಮನೆಗಳ ಒಳಗೆ ಕ್ರಿಮಿನಾಶಕಗಳನ್ನು ಸಿಂಪಡಿಸುವುದು ಮತ್ತೊಂದು ವಿಧಾನ, ಆದರೂ ಇದನ್ನು ಡಬ್ಲುಎಚ್‍ಒ ಶಿಫಾರಸ್ಸು ಮಾಡಿಲ್ಲ. ಇದೇತರಹ ಮಲೇರಿಯವನ್ನು ಹರಡುವ ಅನಾಫಿಲಿಸ್ ಸೊಳ್ಳೆ, ಎ.ಈಜಿಪ್ಟಿ ಗಳ ವಿರುದ್ಧ ಸೊಳ್ಳೆ ಪರದೆಗಳು ಕ್ರಿಮಿನಾಶಕಗಳ ರೂಪದಲ್ಲಿ ಯಶಸ್ವಿಯಾಗಿ ಉಪಯೋಗಿಸಲಾಗುತ್ತದೆ.[೫]
ಚಿಕಿತ್ಸೆ
ಫ್ಲೆವಿವೈರಸ್ ಕಾರಣದಿಂದ ಉಂಟಾಗುವ ಎಲ್ಲಾ ರೋಗಗಳಂತೆ ಕಾಮಾಲೆಗೆ ಯಾವುದೇ ಕಾಸೆಟಿವ್ ಚಿಕಿತ್ಸೆ ಇಲ್ಲ. ಆಸ್ಪತ್ರೆಗೆ ಹೋಗುವುದು ತುಂಬಾ ಒಳ್ಳೆಯದು ಮತ್ತು ತೀವ್ರವಾದ ಎಚ್ಚರಿಕೆ ಅವಶ್ಯಕವಾಗಿರಬಹುದು ಏಕೆಂದರೆ ಕೆಲವು ಜನರಲ್ಲಿ ತ್ವರಿತವಾಗಿ ಉಲ್ಬಣಿಸುತ್ತದೆ. ರೋಗದ ಚಿಕಿತ್ಸೆಗಳ ವಿವಿಧ ವಿಧಾನಗಳು ಹೆಚ್ಚು ಯಶಸ್ಸನ್ನು ಕಂಡಿಲ್ಲ; ನೇರವಲ್ಲದ ರೊಗನಿರೋಧಕವನ್ನು ರೋಗ ಲಕ್ಷಣಗಳು ಕಂಡುಬಂದ ನಂತರ ಕೊಟ್ಟರೆ ಬಹುಶಃ ಯಾವುದೇ ಪರಿಣಾಮಗಳಿಲ್ಲದೆ ರೋಗವನ್ನು ತಡೆಯಬಹುದಾಗಿದೆ. ರಿಬವರಿನ್ ಮತ್ತು ಇತರ ಎಂಟಿವೈರಲ್ ಔಷಧಿಗಳು ಮತ್ತು ಪ್ರತಿಬಂಧಕ ಪ್ರೋಟೀನಿನ ಜೊತೆಗಿನ ಚಿಕಿತ್ಸೆ ಸಹ ರೋಗಿಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿಲ್ಲ.[೧೫] ಪುನರ್ಜಲೀಕರಣ ಮತ್ತು ಪೆರಸಿತಮೊಲ್ ನಂತಹ ನೋವು ನಿವಾರಕ ಔಷಧಿಗಳನ್ನು ಲಕ್ಷಣಸೂಚಕ ಚಿಕಿತ್ಸೆ ಒಳಗೊಂಡಿದೆ. ಅಸೆತಿಲ್ಸೆಲಿಸಿಲಿಕ್ ಎಸಿಡ್ (ಉದಾಹರಣೆಗೆ ಆಸ್ಪರಿನ್ ) ಕೊಡಲೇಬಾರದು ಏಕೆಂದರೆ ಇದರ ಹ್ಯುಮೊಡಿಲೇಟಿಂಗ್ ಪರಿಣಾಮದಿಂದ ಇದು ಕಾಮಾಲೆಯ ಕಾರಣದಿಂದ ಉಂಟಾಗುವ ಆಂತರಿಕ ರಕ್ತಸ್ರಾವದ ಸಂದರ್ಭದಲ್ಲಿ ತುಂಬಾ ಹಾನಿಕಾರಕ.
ಸೋಂಕು/ಸಾಂಕ್ರಾಮಿಕಶಾಸ್ತ್ರ
ದಕ್ಷಿಣ ಅಮೇರಿಕ ಮತ್ತು ಆಫ್ರಿಕಗಳ ಉಷ್ಣವಲಯ ಮತ್ತು ಸಮತೋಷ್ಣವಲಯಗಳಲ್ಲಿ ಕಾಮಾಲೆ ಸ್ಥಳೀಯ-ರೋಗವಾಗಿದೆ. ಆದಾಗ್ಯೂ ಮುಖ್ಯ ವೆಕ್ಟರ್ ಎದೆಸ್ ಈಜಿಪ್ಟಿ ಏಷ್ಯಾದಲ್ಲೂ ಸಹ ಸಂಭವಿಸುತ್ತದೆ, ಪೆಸಿಫಿಕ್ ಮತ್ತು ಮಧ್ಯ ಪೂರ್ವ ಪ್ರದೇಶಗಳಲ್ಲಿ ಕಾಮಾಲೆ ಉಂಟಾಗುವುದಿಲ್ಲ; ಇದಕ್ಕೆ ಕಾರಣ ತಿಳಿದುಬಂದಿಲ್ಲ.
ವಿಶ್ವದಾದ್ಯಂತ ೬೦೦ ಮಿಲಿಯನ್ ಜನರು ಸ್ಥಳೀಯ-ರೋಗವಿರುವ ಪ್ರದೇಶಗಳಲ್ಲಿ ವಾಸವಾಗಿದ್ದಾರೆ ಮತ್ತು ಡಬ್ಲುಎಚ್‍ಒದ ಅಧಿಕೃತ ಅಂದಾಜಿನ ಪ್ರಕಾರ ಒಂದು ವರ್ಷದಲ್ಲಿ ೨೦೦,೦೦೦ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ ಮತ್ತು ೩೦,೦೦೦ ಸಾವುಗಳಾಗಿವೆ; ಅಧಿಕೃತವಾಗಿ ದಾಖಲಾದ ಘಟನೆಗಳು ತುಂಬಾ ಕಡಿಮೆ. ಅಂದಾಜಿಸಿದ ಸೋಂಕಿನ ೯೦% ಆಫ್ರಿಕ ಖಂಡದಲ್ಲಿ ಸಂಭವಿಸಿದೆ. ೨೦೦೮ರಲ್ಲಿ ಅತ್ಯಂತ ಹೆಚ್ಚಿನ ಜನರು ಟೋಗೊದಲ್ಲಿ ಈ ರೋಗಕ್ಕೆ ತುತ್ತಾಗಿದ್ದಾರೆ.
ಫಿಲೊಜೆನೆಟಿಕ್ ವಿಶ್ಲೇಷಣೆ ಏಳು ಜೆನೋಟೈಪ್ ವೈರಸ್ಸುಗಳನ್ನು ಪತ್ತೆಮಾಡಿದೆ, ಅದು ಬೇರೆ ಬೇರೆ ರೀತಿ ಮನುಷ್ಯರನ್ನು ಮತ್ತು ವೆಕ್ಟರ್ ಎ.ಈಜಿಪ್ತಿ ಗಳನ್ನು ಸೇರುತ್ತದೆ. ಆಫ್ರಿಕಾದಲ್ಲಿ ಒಂದೇ ಐದು ರೀತಿಯ ಜಿನೋಟೈಪುಗಳು ಉಂಟಾಗಿವೆ, ಮತ್ತು ಇದನ್ನು ಪಶ್ಚಿಮ ಆಫ್ರಿಕ-ಜಿನೋಟೈಪ್ ಎಂದು ಊಹಿಸಲಾಗಿದೆ, ಇದು ಮುಖ್ಯವಾಗಿ ಮಾರಕ ಅಥವಾ ಸಾಂಕ್ರಾಮಿಕ, ಏಕೆಂದರೆ ಇದು ಕೆಲವೊಮ್ಮೆ ತೀವ್ರ ತರವಾದ ಕಾಮಾಲೆಗೆ ಕಾರಣವಾಗುತ್ತದೆ. ದಕ್ಷಿಣ ಅಮೇರಿಕಾದಲ್ಲಿ ಎರಡು ರೀತಿಯ ಜಿನೋಟಾಯಿಪನ್ನು ಗುರುತಿಸಲಾಗಿದೆ.[೭]
ಇತಿಹಾಸ
ಕಾಮಾಲೆ ಬೆಳವಣಿಗೆಯ ಮೂಲವು ಹೆಚ್ಚಾಗಿ ಆಫ್ರಿಕಾದಲ್ಲಿ ನೆಲೆಗೊಂಡಂತದ್ದು.[೨೨] ವೈರಸ್ ಉತ್ಪತ್ತಿಯಾದದ್ದು ಪೂರ್ವ ಮತ್ತು ಮಧ್ಯ ಆಫ್ರಿಕಾದಲ್ಲಿ ಹಾಗೂ ಅಲ್ಲಿಂದ ಅದು ಪಶ್ಚಿಮ ಆಫ್ರಿಕಾಕ್ಕೆ ಪ್ರಸಾರಗೊಂಡಿತೆಂದು ತಿಳಿಯಲ್ಪಟ್ಟಿದೆ. ವೈರಸ್ ಹಾಗೆಯೇ ಅದನ್ನು ಸಾಗಿಸುವ ಎ. ಈಜಿಪ್ಟಿ ಬಹುಶಃ 1492ರ ನಂತರ ದಕ್ಷಿಣ ಅಮೇರಿಕಾಕ್ಕೆ ಹಡಗಿನಲ್ಲಿ ಬಂದಿರಬಹುದು. ಮೊದಲ ಬಾರಿ ರೋಗವು ಬಹುಮಟ್ಟಿಗೆ ಕಾಣಿಸಿಕೊಂಡದ್ದು ಯುಕಟ್ಯಾನ್‌ನಲ್ಲಿ ೧೬೪೮ರಲ್ಲಿ, ಅಲ್ಲಿ ರೋಗವು ಗ್ಸೆಕಿಕ್ (ಕಪ್ಪು ವಾಂತಿ) ಆಗಿ ತಿರುಗಲ್ಪಟ್ಟಿತು. ಕಡಿಮೆ ಎಂದರೂ ೨೫ ಕಡೆ ಗಂಭೀರ ಸ್ಥಿತಿಗಳು ಕಾಣಿಸಿಕೊಂಡವು, ಅವೆಂದರೆ ೧೭೯೩ರಲ್ಲಿ ಫಿಲೆಡೆಲ್ಫಿಯಾದಲ್ಲಿ, ಹಲವು ಸಾವಿರ ಜನರು ಮೃತಪಟ್ಟರು ಮತ್ತು ಅಮೇರಿಕಾದ ಆಡಳಿತಗಾರ ಹಾಗೆಯೇ ಜಾರ್ಜ್ ವಾಶಿಂಗ್ಟನ್ ಪಟ್ಟಣವನ್ನು ತೊರೆಯ ಬೇಕಾಯಿತು.[೨೩] ಉತ್ತರ ಅಮೇರಿಕಾದಲ್ಲಿ ಕಾಮಾಲೆಯು ಸಾಂಕ್ರಾಮಿಕ ರೋಗವಾಯಿತು ಮತ್ತು ೧೦೦,೦೦೦-೧೫೦,೦೦೦ ಜನರ ಸಾವಿಗೆ ಕಾರಣವಾಯಿತು.[೨೪] ಯುರೋಪಿನಲ್ಲಿ ಕೂಡ ಪ್ರಮುಖ ಪ್ರಕರಣಗಳು ಕಾಣಿಸಿಕೊಂಡಿತು, ಉ.ದಾ. ೧೮೨೧ರಲ್ಲಿ ಬಾರ್ಸಿಲೋನಾದಲ್ಲಿ ಹಲವು ಸಾವಿರ ಜನರು ಇದಕ್ಕೆ ಆಹುತಿಯಾದರು. ೧೮೭೮ರಲ್ಲಿ, ಮಿಸ್ಸಿಸ್ಸಿಪ್ಪಿ ನದಿ ಕಣಿವೆಯಲ್ಲಿ ಸಾಂಕ್ರಾಮಿಕ ರೋಗಕ್ಕೆ ೨೦,೦೦೦ಕ್ಕಿಂತ ಹೆಚ್ಚು ಜನರು ಸಾವಿಗೀಡಾದರು ಮತ್ತು ಯುಎಸ್‌ನಲ್ಲಿ ಕೊನೆಯ ಗಂಭೀರ ಪ್ರಕರಣ ಕಾಣಿಸಿಕೊಂಡದ್ದು ೧೯೦೫ರಲ್ಲಿ ನ್ಯೂ ಒರ್ಲಾನ್ಸನಲ್ಲಿ.[೭] ವಸಾಹತುಶಾಹಿ ಕಾಲದಲ್ಲಿ, ಪಶ್ಚಿಮ ಆಫ್ರಿಕಾವು ಮಲೇರಿಯಾ ಮತ್ತು ಕಾಮಾಲೆಯಿಂದಾಗಿ "ಬಿಳಿ ಮನುಷ್ಯರ ಸಮಾಧಿ" ಎಂದು ಕರೆಯಲ್ಪಟ್ಟಿತು.[೨೫]
ಕೊನೆಯಲ್ಲಿ ಕಾರ್ಲೋಸ್ ಅವರು, ಕ್ಯೂಬಾದ ವೈದ್ಯ ಮತ್ತು ವಿಜ್ಞಾನಿ, ಮೊದಲಬಾರಿ ೧೮೮೧ರಲ್ಲಿ ಕಾಮಾಲೆಯು ಮನುಷ್ಯರ ನೇರ ಸಂಪರ್ಕದಿಂದಷ್ಟೇ ಅಲ್ಲದೆ ಸೊಳ್ಳೆಯಿಂದ ಕೂಡ ಹರಡುವುದೆಂದು ಮಂಡಿಸಿದರು.[೨೬] 1890ರಲ್ಲಿ ಕ್ಯುಬಾದಲ್ಲಿ ಕಾಮಾಲೆಯ ದಾಳಿಯಿಂದ ಉಂಟಾದ ನಷ್ಟವು, ಮಿಲಿಟರಿ ಕಾರ್ಯಾಚರಣೆಯಿಂದ ಉಂಟಾಗುವ ನಷ್ಟಕ್ಕಿಂತ ಹದಿಮೂರುಪಟ್ಟು ಹೆಚ್ಚಾಗಿತ್ತು, ವಾಲ್ಟರ್ ರೀಡ್ ಅವರ ನೇತೃತ್ವದ ತಂಡವು ಹೆಚ್ಚಿನ ಪ್ರಯೋಗಗಳನ್ನು ನಿರ್ವಹಿಸಿ "ಮೊಸ್ಕಿಟೊ ಹೈಪೊಥೆಸಿಸ್" ಅನ್ನು ಯಶಸ್ವಿಯಾಗಿ ಸಾಧಿಸಿ ತೋರಿಸಿತು. ಹೀಗೆ ಕಾಮಾಲೆಯು ಸೊಳ್ಳೆಯಿಂದ ಒಯ್ಯಲ್ಪಟ್ಟ ಮೊದಲ ವೈರಸ್ ಎಂದೆನಿಸಿತು. ವೈದ್ಯರಾದ ವಿಲಿಯಮ್ ಗೋರ್ಗಸ್ ಅವರು ನಂತರ ಈ ಒಳನೋಟವನ್ನು ಬಳಸಿಕೊಂಡರು ಮತ್ತು ಹವಾನಾದಲ್ಲಿ ಕಾಮಾಲೆಯನ್ನು ಬುಡಸಹಿತ ನಿರ್ಮೂಲನೆ ಮಾಡಿದರು, ಪನಾಮಾ ಕಾಲುವೆ ನಿರ್ಮಾಣದ ವೇಳೆ ಕಾಮಾಲೆಯ ವಿರುದ್ಧ ಹೋರಾಡಿದರು - ಕಾಲುವೆ ನಿರ್ಮಿಸಬೇಕೆಂಬ ಫ್ರೆಂಚರ ಪ್ರಯತ್ನದ ವಿಫಲೆಯಲ್ಲಿ ಹಲವು ಕಾರಣಗಳಲ್ಲಿ ಅತ್ಯಧಿಕ ಕಾಮಾಲೆ ಮತ್ತು ಮಲೇರಿಯಾ ಪ್ರಕರಣವೂ ಒಂದಾಗಿತ್ತು.[೭]
ಇತಿಹಾಸ ಪುಸ್ತಕಗಳಲ್ಲಿ ಕಾಮಾಲೆ ರೋಗವನ್ನು "ಹೊಡೆದೋಡಿಸಿದ" ಗೌರವದ ಹೆಚ್ಚಿನ ಪಾಲನ್ನು ಡಾ.ರೀಡ್ ಅವರು ಪಡೆದಿದ್ದರೂ, ಸ್ವತಃ ರೀಡ್ ಅವರು ಕಾಮಾಲೆ ಪ್ರಸರಣವನ್ನು ಕಂಡುಹಿಡಿದ ಮತ್ತು ಹಾಗೆಯೇ ಇದನ್ನು ನಿಯಂತ್ರಣಕ್ಕೆ ತಂದ ಡಾ.ಫಿನ್‌ಲೆ ಅವರಿಗೆ ಆ ಗೌರವವನ್ನು ನೀಡುವರು. ಡಾ. ರೀಡ್ ತಮ್ಮ ಲೇಖನಗಳಲ್ಲಿ ಹಲವುಬಾರಿ ಫಿನ್‌ಲೆ ಅವರ ಕಾಗದಗಳನ್ನು ಉದಾಹರಿಸಿದ್ದಾರೆ ಮತ್ತು ತಮ್ಮ ವೈಯಕ್ತಿಕ ಪತ್ರಗಳಲ್ಲಿ ಕೂಡ, ಪತ್ತೆಹಚ್ಚಿದ್ದಕ್ಕಾಗಿ ಗೌರವವನ್ನು ಸೂಚಿಸಿದ್ದಾರೆ.[೨೭] ೧೯೦೦ರ ವಾಲ್ಟರ್ ರೀಡ್ ಆಯೋಗಕ್ಕೆ ಫಿನ್‌ಲೆ ಅವರ ಕೆಲಸವನ್ನು ಒಪ್ಪಿಕೊಳ್ಳುವುದು ಅತಿ ಪ್ರಮುಖವಾದ ಮತ್ತು ದೂರಗಾಮಿ ಫಲಿತಾಂಶವಾಗಿತ್ತು.[೨೮] ಫಿನ್‌ಲೆ ಅವರಿಂದ ಸೂಚಿಸಲ್ಪಟ್ಟ ಕ್ರಮವನ್ನು ಅನ್ವಯಿಸುತ್ತಾ, ಮೊದಲು ಕಾಮಾಲೆಯನ್ನು ಕ್ಯುಬಾದಲ್ಲಿ ಮತ್ತು ನಂತರ ಪನಾಮಾದಲ್ಲಿ ನಿರ್ಮೂಲನೆ ಮಾಡುತ್ತಾ, ಪನಾಮಾ ಕಾಲುವೆ ನಿರ್ಮಿಸಲು ಅವಕಾಶ ನೀಡಲಾಯಿತು.
೧೯೨೭ರಲ್ಲಿ, ಕಾಮಾಲೆಯ ವೈರಸ್ ಪಶ್ಚಿಮ ಆಫ್ರಿಕಾದಲ್ಲಿ ಪ್ರತ್ಯೇಕಿಸಲ್ಪಟ್ಟಿತು, ಇದು ೧೯೩೦ರಲ್ಲಿ ಎರಡು ಲಸಿಕೆಯ ವಿಕಸನಕ್ಕೆ ದಾರಿ ಮಾಡಿಕೊಟ್ಟಿತು. ಡಿ೧೭ ಲಸಿಕೆಯನ್ನು ಸೌತ್ ಆಫ್ರಿಕಾದ ಸೂಕ್ಷ್ಮಜೀವವಿಜ್ಞಾನಿ ಮ್ಯಾಕ್ಸ್ ಥೇಲರ್ ಅವರು ರಾಕ್‌ಫೆಲ್ಲರ್ ಸಂಸ್ಥೆಯಲ್ಲಿ ವೃದ್ಧಿಪಡಿಸಿದರು. ಈ ಮೇಲಿನ ಕಾರ್ಯಕ್ಕಾಗಿ ಅರ್ನೆಸ್ಟ್ ಗುಡ್‌ಪಾಸ್ಚರ್ ಅವರು, ಕೋಳಿ ಮೊಟ್ಟೆಯನ್ನು ವೈರಸ್ ಪಾಲನೆಗೆ ಬಳಸಿದರು ಮತ್ತು ಸಾಧನೆಗಾಗಿ ೧೯೫೧ರಲ್ಲಿ ನೋಬೆಲ್ ಪಾರಿತೋಷಕ ಗೆದ್ದರು. ಒಂದು ಫ್ರೆಂಚ್ ತಂಡವು ಎಫ್‌ಎನ್‌ವಿ (ಫ್ರೆಂಚ್ ನ್ಯೂರೋಟ್ರೊಪಿಕ್ ವ್ಯಾಕ್ಸೀನ್ ) ಲಸಿಕೆಯನ್ನು ವೃದ್ಧಿಪಡಿಸಿತು, ಇದನ್ನು ಇಲಿಯ ಮಿದುಳಿನ ಜೀವಕೋಶದಿಂದ ತೆಗೆಯಲಾಯಿತು - ಆದರೆ ಇದು ಅಧಿಕ ಮಸ್ತಿಷ್ಕೋದ್ರೇಕ ಪರಿಣಾಮನ್ನು ಹೊಂದಿರುವುದರಿಂದ, ೧೯೬೧ ರ ನಂತರ ಎಫ್‌ಎನ್‌ವಿಯನ್ನು ಶಿಫಾರಸ್ಸು ಮಾಡಲಿಲ್ಲ. ಮತ್ತೊಂದು ಕಡೆ ೧೭ಡಿ ಯು ಈಗಲೂ ಬಳಕೆಯಲ್ಲಿದೆ ಮತ್ತು ೪೦೦ ಮಿಲಿಯನ್‌ನಷ್ಟು ಔಷಧ ಪ್ರಮಾಣವನ್ನು (ಡೋಸೇಜ್) ವಿತರಿಸಲಾಯಿತು. ಹೊಸ ಲಸಿಕೆಯ ವೃದ್ಧಿಗೆ ಸ್ವಲ್ಪ ಮಟ್ಟಿಗೆ ಹಣ ತೊಡಗಿಸಿದ್ದರೂ, ೬೦ ವರ್ಷಗಳಷ್ಟು ಹಳೆಯ ತಂತ್ರಜ್ಞಾನವು ಕಾಮಾಲೆಯ ಸೋಂಕನ್ನು ಅತಿ ವೇಗವಾಗಿ ಅಳವಡಿಕೊಳ್ಳುವಷ್ಟು ಸಾಧ್ಯತೆಯನ್ನು ಹೊಂದಿಲ್ಲ. ವಿರೊ ಜೀವಕೋಶವನ್ನು ಅವಲಂಬಿಸಿದ ಹೊಸ ಲಸಿಕೆಗಳು ವೃದ್ಧಿಯಾಗುತ್ತಿವೆ ಮತ್ತು ಕೆಲವು ವಿಷಯಗಳಲ್ಲಿ ಇದು ೧೭ಡಿ ಯನ್ನು ಬದಲಿಸಬೇಕಿದೆ.[೫]
ಪ್ರಸರಣದ ನಿಯಂತ್ರಣ ಬಳಕೆಯಿಂದ ಮತ್ತು ಕಟ್ಟುನಿಟ್ಟಿನ ದೇವಿ ಹಾಕಿಸುವುದರಿಂದ (ಲಸಿಕೆ ಹಾಕಿಸುವುದರಿಂದ), ಅರ್ಬನ್ ಸೈಕಲ್ ಆಫ್ ಯೆಲ್ಲೊ ಫೀವರ್ ದಕ್ಷಿಣ ಅಮೇರಿಕಾದಿಂದ ಕಾಮಾಲೆಯನ್ನು ನಿರ್ಮೂಲನೆ ಮಾಡಿದೆ ಮತ್ತು ಬೊಲಿವಿಯಾದ ಸಾಂತಾ ಕ್ರೂಜ಼್ ಡಿ ಲಾ ಸಿಯೆರಾ ಪಟ್ಟಣದಲ್ಲಿ ಇದು ಕಾಣಿಸಿಕೊಂಡದ್ದನ್ನು ಹೊರತಾಗಿ - ೧೯೪೩ ರಿಂದ - ಅಲ್ಲಿ ಎ.ಎಜಿಪ್ತಿ ಸೊಳ್ಳೆಯಿಂದ ಪ್ರಸರಣೆಗೊಂಡ ಯಾವುದೇ ಮಾಹಿತಿಯಿಲ್ಲ. ೧೯೮೦ರಿಂದ ಕಾಮಾಲೆಯ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗಲು ಆರಂಭಿಸಿದೆ ಹಾಗೂ A. ಎಜಿಪ್ಟೈ ದಕ್ಷಿಣ ಅಮೇರಿಕಾದ ನಗರದ ಕೇಂದ್ರಗಳಿಗೆ ಮರಳಿದೆ; ಭಾಗಶಃ ಸದಿಶ ಚಳುವಳಿಯನ್ನು ಸ್ಥಗಿತಗೊಳಿಸಿದ್ದು ಇದಕ್ಕೆ ಕಾರಣವಾಗಿರಬೇಕು. ಇದುವರೆಗೂ ಯಾವುದೇ ಹೊಸ ನಗರದ ಆವೃತ್ತಿ ತಾನಾಗಿ ಸ್ಥಾಪಿತಗೊಳ್ಳದಿದ್ದರೂ ಕೂಡ, ಇದು ಯಾವ ಘಳಿಗೆಯಲ್ಲೂ ಆಗಬಹುದೆಂದು ಭಯ ಉಂಟಾಗಿದೆ. ಪೆರಗ್ವೆನಲ್ಲಿನ ೨೦೦೮ರ ಆಸ್ಪೋಟನೆಯನ್ನು ಮೊದಲಿಗೆ ನಗರದ ಆವೃತ್ತಿಯ ರೂಪ ಎಂದು ಭಾವಿಸಲಾಗಿತ್ತು, ಆದರೆ ಇದು ಅಂತಹ ಪ್ರಸಂಗವಾಗಿರಲಿಲ್ಲ.[೫]
ಇನ್ನೊಂದೆಡೆ ಆಫ್ರಿಕಾದಲ್ಲಿ, ರೋಗಾಣುವಿನ ತೊಗಲಿಕೆಯ ಬಹಳಷ್ಟು ಕಾರ್ಯಕ್ರಮಗಳು ಲಸಿಕೆಗಳನ್ನು ಬಳಸಿವೆ. ಆದರೆ ಸಿಲ್ವ್ಯೆಟಿಕ್ ಆವೃತ್ತಿಯನ್ನು ತೊಲಗಿಸಲು ಸಾಧ್ಯವಾಗದ ಕಾರಣ ಇದು ಕೂಡ ಅಸಫಲವಾಗಿದೆ. ಕೆಲವು ದೇಶಗಳು ನಿಯಮಿತವಾಗಿ ಲಸಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾರಣ ಕಾಮಾಲೆಯ ವಿರುದ್ಧದ ಹೋರಾಟವನ್ನು ಸ್ಥಗಿತಗೊಳಿಸಿದ ನಂತರ ಪುನಃ ರೋಗಾಣು ಹರಡಬಹುದು.[೫]
ಸಂಶೋಧನೆ
ಕಾಮಾಲೆಯ ಕುರಿರ್ತಾದ ಹ್ಯಾಮ್‌ಸ್ಟರ್ ಮಾಡೆಲ್‌ನಲ್ಲಿ, ಹಲವು ಬಾರಿ ರೋಗದ ಪ್ರಾಥಮಿಕ ಹಂತದ ವೈರಸ್ ನಿರೋಧಕ ಚಿಕಿತ್ಸೆಯಲ್ಲಿ ರಿಬಾವೈರಿನ್ ಉತ್ತಮವಾದುದು ಎಂದು ಕಂಡುಕೊಳ್ಳಲಾಗಿದೆ.[೨೯] ರಿಬಾವೈರಿನ್ ಚಿಕಿತ್ಸೆಯಲ್ಲಿ ವೈರಸ್ ದಾಳಿ ಮಾಡಿದ ಮೊದಲ ಐದು ದಿನಗಳಲ್ಲೇ ಇದನ್ನು ಕೊಟ್ಟಾಗ ಬದುಕುಳಿದವರ ಸಂಖ್ಯೆ ಹೆಚ್ಚಿತ್ತು. ಅಲ್ಲದೆ ಯಾವುದೇ ರೀತಿಯ ಇತರೆ ಅಂಗಗಳ ಹಾನಿಯೂ ಕೂಡ ಕಡಿಮೆ ಪ್ರಮಾಣದಲ್ಲಿತ್ತು(ಪಿತ್ತಜಕನಾಂಗ ಹಾಗೂ ಯಕೃತ್ತು). ಅಲ್ಲದೆ ಪಿತ್ತಜನಕಾಂಗದ ಊದಿಕೊಳ್ಳುವಿಕೆಯನ್ನು ತಡೆದಿದ್ದಲ್ಲದೆ ಅಲಾನೈನ್ ಅಮೈನೊ ವರ್ಗಾವಣೆಯನ್ನು ಸರಳಗಿಳಿಸಿತು. ಈ ಅಧ್ಯಯನದ ಫಲಿತಾಂಶಗಳು ರಿಬವೈರಿನ್ ಕಾಮಾಲೆಯ ಆರಂಭಿಕದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಬಹುದು ಎಂದು ಸಲಹೆ ನೀಡಿವೆ. ಕಾಮಾಲೆಯ ರೋಗಾಣುವಿನ ಸೋಂಕಿನಲ್ಲಿ ಪಿತ್ತಕೋಶಾದ ಪ್ಯಾಥೋಲಜಿಯನ್ನು ಕಡಿಮೆಗೊಳಿಸುವ ಅದರ ತಂತ್ರವು ಹೆಪಟೈಟಿಸ್ C ಯಿನ ಚಿಕಿತ್ಸೆಯಲ್ಲಿನ ರಿಬವೈರಿನ್, ಕಾಮಾಲೆಗೆ ಸಂಬಂಧಿಸಿದ ಒಂದು ರೋಗಾಣುಗೆ ಹೋಲುತ್ತದೆ.[೨೯] ಒಂದು ಮಾರಕವಾದ ಪ್ರೈಮೇಟ್ (rhesus)ನ ರೂಪದ ಕಾಮಾಲೆಯ ಸೋಂಕಿನಲ್ಲಿ ರಿಬವೈರಿನ್ ಜೀವಿತಾವಧಿಯನ್ನು ಉನ್ನತಗೊಳಿಸಲು ಅಸಫಲವಾದ ಕಾರಣ, ಇದನ್ನು ಹಿಂದೆ ಒಂದು ಸಾಧ್ಯವಾದ ಚಿಕಿತ್ಸಾ ವಿಧಾನ ಎಂದು ಪರಿಗಣಿಸಲಾಗಿರಲಿಲ್ಲ.[೩೦]
ಈ ಹಿಂದೆ ಕಾಮಾಲೆಯನ್ನು ಹಲವು ದೇಶಗಳು ಒಂದು ಸಮರ್ಥ ಜೈವಿಕ ಶಸ್ತ್ರ ಎಂದು ಸಂಶೋಧಿಸಿದ್ದಾರೆ.[೩೧]
ಆಕರಗಳು
- ↑ Schmaljohn AL, McClain D. (1996). "Alphaviruses (Togaviridae) and Flaviviruses (Flaviviridae)". In Baron S (ed.). Medical Microbiology (4th ed.). Univ of Texas Medical Branch. ISBN 0-9631172-1-1.
- ↑ "CDC Yellow Fever". Retrieved 2010-03-13.
- ↑ Oldstone, Michael B. A. (2000). Viruses, Plagues, and History (1st ed.). Oxford University Press. p. 45. ISBN 0195134222.
- ↑ ೪.೦ ೪.೧ "Yellow fever fact sheet". WHO—Yellow fever. Retrieved 2006-04-18.
- ↑ ೫.೦೦ ೫.೦೧ ೫.೦೨ ೫.೦೩ ೫.೦೪ ೫.೦೫ ೫.೦೬ ೫.೦೭ ೫.೦೮ ೫.೦೯ ಉಲ್ಲೇಖ ದೋಷ: Invalid
<ref>
tag; no text was provided for refs namedpmid19327647
- ↑ ೬.೦ ೬.೧ Ryan KJ; Ray CG (editors) (2004). Sherris Medical Microbiology (4th ed.). McGraw Hill. ISBN 0-8385-8529-9.
{{cite book}}
:|author=
has generic name (help)CS1 maint: multiple names: authors list (link) ಉಲ್ಲೇಖ ದೋಷ: Invalid<ref>
tag; name "Sherris" defined multiple times with different content - ↑ ೭.೦ ೭.೧ ೭.೨ ೭.೩ ೭.೪ ೭.೫ Barrett AD, Higgs S (2007). "Yellow fever: a disease that has yet to be conquered". Annu. Rev. Entomol. 52: 209–29. doi:10.1146/annurev.ento.52.110405.091454. PMID 16913829.
- ↑ "WHO | Yellow fever". Retrieved 2009-08-13.
- ↑ Chastel C (2003). "[Centenary of the discovery of yellow fever virus and its transmission by a mosquito (Cuba 1900–1901)]". Bull Soc Pathol Exot (in French). 96 (3): 250–6. PMID 14582304.
{{cite journal}}
: Unknown parameter|month=
ignored (help)CS1 maint: unrecognized language (link) - ↑ Modrow, Susanne; Falke, Dietrich; Truyen, Uwe (2002). Molekulare Virologie – Eine Einführung für Biologen und Mediziner (2. Auflage ed.). Spektrum Akademischer Verlag. p. 182. ISBN 382741086X.
- ↑ "ಸೆಕ್ಷನ್ 2.1.2 ದ ಗ್ಲೋಬಲ್ ಡಿಸ್ಟ್ರೀಬ್ಯುಷನ್ ಆಫ್ ಯಲೋ ಫೀವರ್ ಆಯ್‌೦ಡ್ ಡೆಂಗ್ಯು ಡಿ.ಜೆ ರೋಜರ್ಸ್, ಎ.ಜೆ ವಿಲ್ಸನ್,ಎಸ್.ಐ ಹೇ ಆಯ್‌೦ಡ್ ಎ.ಜೆ ಗ್ರಹಾಮ್ ಅಡ್ವಾನ್ಸಸ್ ಇನ್ ಪ್ಯಾರಾಸಿಟೊಲಜಿ ಆವೃತ್ತಿ 62 2006" (PDF). Archived from the original (PDF) on 2011-05-15. Retrieved 2010-06-15.
- ↑ ೧೨.೦ ೧೨.೧ ೧೨.೨ ೧೨.೩ Sampath A, Padmanabhan R (2009). "Molecular targets for flavivirus drug discovery". Antiviral Research. 81 (1): 6–15. doi:10.1016/j.antiviral.2008.08.004. PMC 2647018. PMID 18796313.
{{cite journal}}
: Unknown parameter|month=
ignored (help) - ↑ ಡಿ ಫೊಂನ್ಟೆನಿಲ್ಲೆ ಎಟ್ ಅಲ್ : ಫಸ್ಟ್ ಎವಿಡೆನ್ಸ್ ಆಪ್ ನ್ಯಾಚುರಲ್ ವರ್ಟಿಕಲ್ ಟ್ರಾನ್ಸ್‌ಮಿಷನ್ ಫೀವರ್ ವೈರಸ್ ಇನ್ Aedes aegypti , ಇಟ್ಸ್ ಎಪಿಡೆಮಿಕ್ ವೆಕ್ಟರ್ . ಟ್ರಾನ್ಸ್ ಆರ‍್ ಸೊಕ್ ಟ್ರೊಪ್ ಮೆಡ್ ಹೈಗ್ . (೧೯೯೭) ೯೧(೫): S. ೫೩೩–೫೩೫ PMID ೯೪೬೩೬೫೯
- ↑ Quaresma JA, Barros VL, Pagliari C, Fernandes ER, Guedes F, Takakura CF, Andrade HF Jr, Vasconcelos PF, Duarte MI (2006). "Revisiting the liver in human yellow fever: virus-induced apoptosis in hepatocytes associated with TGF-beta, TNF-alpha and NK cells activity". Virology. 345 (1): 22–30. doi:10.1016/j.virol.2005.09.058. PMID 16278000.
{{cite journal}}
: CS1 maint: multiple names: authors list (link) - ↑ ೧೫.೦ ೧೫.೧ ೧೫.೨ ಉಲ್ಲೇಖ ದೋಷ: Invalid
<ref>
tag; no text was provided for refs namedpmid18061688
- ↑ ೧೬.೦ ೧೬.೧ ೧೬.೨ ೧೬.೩ Barrett AD, Teuwen DE (2009). "Yellow fever vaccine – how does it work and why do rare cases of serious adverse events take place?". Current Opinion in Immunology. 21 (3): 308–13. doi:10.1016/j.coi.2009.05.018. PMID 19520559.
{{cite journal}}
: Unknown parameter|month=
ignored (help) - ↑ "Supplementary information on vaccine safety" (PDF). Archived from the original (PDF) on 2003-04-26. Retrieved 2009-10-11.
- ↑ ೧೮.೦ ೧೮.೧ ೧೮.೨ "Twelve million West Africans get yellow fever vaccines". BBC News. 23 November 2009. Retrieved 23 November 2009.
- ↑ "West Africa: 12m to be vaccinated for yellow fever". Times Live. 22 November 2009. Archived from the original on 24 ನವೆಂಬರ್ 2009. Retrieved 24 November 2009.
- ↑ "Mass vaccinations to fight yellow fever in Africa". Reuters. 17 November 2009. Retrieved 24 November 2009.
- ↑ "ಆರ್ಕೈವ್ ನಕಲು". Archived from the original on 2009-04-27. Retrieved 2010-06-15.
- ↑ Gould EA, de Lamballerie X, Zanotto PM, Holmes EC (2003). "Origins, evolution, and vector/host coadaptations within the genus Flavivirus". Advances in Virus Research. 59: 277–314. doi:10.1016/S0065-3527(03)59008-X. PMID 14696332.
{{cite journal}}
: CS1 maint: multiple names: authors list (link) - ↑ "Yellow Fever Attacks Philadelphia, 1793". EyeWitness to History. Retrieved 2009-08-14.
- ↑ "ಯೆಲೊ ಫೀವರ್ ಎಪಿಡಮಿಕ್ಸ್ ಆಯ್‌೦ಡ್ ಮೊರ್ಟಾಲಿಟಿ ಇನ್ ದ ಯುನೈಟೆಡ್ ಸ್ಟೇಟ್ಸ್, 1693–1905.". ಉತ್ತರ ಕರೊಲಿನಾ ವಿಶ್ವವಿದ್ಯಾಲಯದ,ಇತಿಹಾಸ ವಿಭಾಗ, ಚಾರ್ಲೊಟ್ಟೆ ೨೮೨೨೩.
- ↑ "ಆಫ್ರಿಕಾ'ಸ್ ನ್ಯಾಷನಲ್ ಸ್ಟಾರ್ಟ್ ಟು ಬಿ ದೇರ‍್‌ಬ್ರದರ್ಸ್' ಕೀಪರ್ಸ್ ". ದ ನ್ಯೂಯಾರ್ಕ್ ಟೈಮ್ಸ್ ಆಕ್ಟೋಬರ್ ೧೫, ೧೯೯೫.
- ↑ Chaves-Carballo E (2005). "Carlos Finlay and yellow fever: triumph over adversity". Mil Med. 170 (10): 881–5. PMID 16435764.
- ↑ ಪೀಯರ್ಸ್ ಜೆ.ಆರ್., ಜೆ, ರೈಟರ್. ೨೦೦೫. ಯೆಲೊ ಜಾಕ್: ಹೌ ಯೆಲೊ ಫೀವರ್ ರೆವೆಜ್ಡ್ ಅಮೆರಿಕಾ ಆಯ್‌೦ಡ್ ವಾಲ್ಟರ್ ರೀಡ್ ಡಿಸ್ಕವರ್ಡ್ ಇಟ್ಸ್ ಡೆಡ್ಲಿ ಸೀಕ್ರೇಟ್ಸ್. ಜಾನ್ ವಿಲ್ಲೇ ಮತ್ತು ಮಕ್ಕಳು. ISBN ೦-೦೩-೦೬೩೭೪೮-೧
- ↑ "Phillip S. Hench Walter Reed Yellow Fever Collection". UVA Health Sciences: Historical Collections. Archived from the original on 2006-09-02. Retrieved 2006-05-06.
- ↑ ೨೯.೦ ೨೯.೧ Sbrana E, Xiao SY, Guzman H, Ye M, Travassos da Rosa AP, Tesh RB (2004). "Efficacy of post-exposure treatment of yellow fever with ribavirin in a hamster model of the disease". Am J Trop Med Hyg. 71 (3): 306–12. PMID 15381811.
{{cite journal}}
: CS1 maint: multiple names: authors list (link) - ↑ Huggins JW (1989). "Prospects for treatment of viral hemorrhagic fevers with ribavirin, a broad-spectrum antiviral drug". Rev Infect Dis. 11 Suppl 4: S750–61. PMID 2546248.
- ↑ "ಕೆಮಿಕಲ್ ಆಯ್‍೦ಡ್ ಬೈಯೋಲಾಜಿಕಲ್ ವೆಪನ್ಸ್ : ಪೊಸೆಶನ್ ಅಯ್‌೦ಡ್ ಪ್ರೊಗ್ರಾಮ್ಸ್ ಫಾಸ್ಟ್ ಆಯ್‌೦ಡ್ ಪ್ರೆಸೆಂಟ್ ", ಜೇಮ್ಸ್ ಮಾರ್ಟಿನ್ ಸೆಂಟರ್ ಫಾರ‍್ ನಾನ್ಪ್ರೊಲಿಫರೆಷನ್ ಸ್ಟಡೀಸ್ , ಮಿಡ್ಲ್‌ಬರಿ ಕಾಲೇಜ್, ಏಪ್ರಿಲ್ ೯, ೨೦೦೨, accessed ನವೆಂಬರ್ ೧೪, ೨೦೦೮.
ಬಾಹ್ಯ ಕೊಂಡಿಗಳು
- ಕಾಮಾಲೆ ಓಪನ್ ಡೈರೆಕ್ಟರಿ ಪ್ರಾಜೆಕ್ಟ್